For the best experience, open
https://m.newskannada.com
on your mobile browser.
Advertisement

‘ಕಾಂತಾರ’ ಪ್ರೀಕ್ವೆಲ್‌ ಶೂಟಿಂಗ್‌ ಬಗ್ಗೆ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ’ ಪ್ರೀಕ್ವೆಲ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಬೈಂದೂರಿನ ಕೆರಾಡಿಯಲ್ಲಿ ರಿಷಬ್ ಮತದಾನ ಮಾಡಿದ್ದಾರೆ. ಈ ವೇಳೆ, ಕಾಂತಾರ ಪಾರ್ಟ್ 1 ಬಗ್ಗೆ ರಿಷಬ್ ಮಾಹಿತಿ ನೀಡಿದ್ದಾರೆ.
05:56 PM May 07, 2024 IST | Ashitha S
‘ಕಾಂತಾರ’ ಪ್ರೀಕ್ವೆಲ್‌ ಶೂಟಿಂಗ್‌ ಬಗ್ಗೆ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ

ಉಡುಪಿ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ’ ಪ್ರೀಕ್ವೆಲ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಬೈಂದೂರಿನ ಕೆರಾಡಿಯಲ್ಲಿ ರಿಷಬ್ ಮತದಾನ ಮಾಡಿದ್ದಾರೆ. ಈ ವೇಳೆ, ಕಾಂತಾರ ಪಾರ್ಟ್ 1 ಬಗ್ಗೆ ರಿಷಬ್ ಮಾಹಿತಿ ನೀಡಿದ್ದಾರೆ.

Advertisement

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಿಷಬ್, ಜನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದ್ರೆ ಒಳ್ಳೆಯದು. ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ‘ಕಾಂತಾರ’ ಪ್ರೀಕ್ವೆಲ್ ಚಿತ್ರೀಕರಣ ಆರಂಭವಾಗಿದೆ. ಸಿನಿಮಾದ ಕೆಲಸ ಬಹಳ ಚೆನ್ನಾಗಿ ನಡೆಯುತ್ತಿದೆ.

‘ಕಾಂತಾರ’ ಸಕ್ಸಸ್ ನಂತರ ಮೊದಲಿಗಿಂತ ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಸಿನಿಮಾಗಾಗಿ ದೊಡ್ಡ ತಂಡ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಹೊಂಬಾಳೆ ಸಂಸ್ಥೆ ಸಿಕ್ಕಿರುವುದು ಫಿಲ್ಮ್ ಮೇಕರ್‌ಗೆ ಒಂದು ಪುಣ್ಯ ಎಂದು ರಿಷಬ್‌ ಖುಷಿಯಿಂದ ಮಾತನಾಡಿದ್ದಾರೆ. ಕಾಂತಾರಗಾಗಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ.

Advertisement

ಸಿನಿಮಾಗೋಸ್ಕರ ಒಂದು ವರ್ಷದಿಂದ ಗಡ್ಡ ಕೂದಲು ಬಿಟ್ಟಿರೋದಾಗಿ ತಿಳಿಸಿದ್ದಾರೆ. ಇನ್ನೂ ‘ಕಾಂತಾರ 1’ ಚಿತ್ರೀಕರಣ ಪೂರ್ತಿ ಮುಗಿದ ಮೇಲೆ ಅಭಿಮಾನಿಗಳಿಗೆ, ಮಾಧ್ಯಮದವರಿಗೆ ಚಿತ್ರೀಕರಣ ಸ್ಥಳಕ್ಕೆ ಕರೆಯುತ್ತೇವೆ. ಚಿತ್ರೀಕರಣ ಮುಗಿಯುವವರೆಗೆ ಬಹಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Advertisement
Tags :
Advertisement