ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹುಟ್ಟೂರು ಕೆರಾಡಿಯಲ್ಲಿ ಮತ ಚಲಾಯಿಸಿದ ರಿಷಬ್ ಶೆಟ್ಟಿ

ಕಾಂತಾರ’ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ‘ಕಾಂತಾರ’ ಪಾರ್ಟ್‌ 1 ಚಿತ್ರದ ಶೂಟಿಂಗ್‌ಗೆ ಬ್ರೇಕ್ ನೀಡಿ ಇಂದು (ಮೇ.7) ಮತದಾನ ಮಾಡಿದ್ದಾರೆ. ರಿಷಬ್ ಹುಟ್ಟುರಾದ ಬೈಂದೂರಿನ ಕೆರಾಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.
04:56 PM May 07, 2024 IST | Ashitha S

ಉಡುಪಿ: ಡಿವೈನ್‌ ಸ್ಟಾರ್ ರಿಷಬ್ ಶೆಟ್ಟಿ ‘ಕಾಂತಾರ’ ಪಾರ್ಟ್‌ 1 ಚಿತ್ರದ ಶೂಟಿಂಗ್‌ಗೆ ಬ್ರೇಕ್ ನೀಡಿ ಇಂದು (ಮೇ.7) ಮತದಾನ ಮಾಡಿದ್ದಾರೆ. ರಿಷಬ್ ಹುಟ್ಟುರಾದ ಬೈಂದೂರಿನ ಕೆರಾಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

Advertisement

ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕೆ, ವೋಟ್ ಮಾಡುವುದು ನಮ್ಮ ಹಕ್ಕು. ಅದು ಪ್ರತಿಯೊಬ್ಬರ ಜವಾಬ್ದಾರಿ. ಇದೀಗ ನಾನು ಮತ ಚಲಾಯಿಸಿದ್ದೇನೆ ಎಂದು ರಿಷಬ್ ಮಾತನಾಡಿದ್ದಾರೆ. ಎಲ್ಲರೂ ಮತ ಚಲಾಯಿಸುವಂತೆ ರಿಷಬ್‌ ಮನವಿ ಮಾಡಿದ್ದಾರೆ. ಮತ ಚಲಾಯಿಸಿದ ನಂತರ ರಿಷಬ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎಲ್ಲರೊಂದಿಗೆ ಬೆರತು ಮಾತನಾಡಿ ಸೆಲ್ಫಿ ನೀಡಿ ನಟ ರಿಷಬ್ ತೆರಳಿದ್ದಾರೆ.

ಈ ವೇಳೆ, ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿ ಮಾಡುತ್ತಿರುವ ಬಗ್ಗೆ ರಿಷಬ್ ಮಾತನಾಡಿ, ಚುನಾವಣೆ ಇರುವುದರಿಂದ ಪೂರ್ತಿ ಕೆಲಸ ಮಾಡಲು ಆಗಿಲ್ಲ. ಶಾಲೆಯ ಗ್ರೌಂಡನ್ನು ಮಕ್ಕಳಿಗೆ ಆಟ ಆಡಲು ದೊಡ್ಡ ಮಾಡಿದ್ದೇವೆ. ಕಟ್ಟಡದ ಕೆಲಸ ಮತ್ತು ಪೀಠೋಪಕರಣ ಕೆಲಸ ಇನ್ನು ಆಗಬೇಕಾಗಿದೆ ಎಂದು ತಿಳಿಸಿದರು.

Advertisement

 

 

Advertisement
Tags :
BJPCongressELECTIONindiaNewsKarnatakaರಿಷಬ್ ಶೆಟ್ಟಿ
Advertisement
Next Article