For the best experience, open
https://m.newskannada.com
on your mobile browser.
Advertisement

ಲಖನೌ ವಿರುದ್ಧದ ಪಂದ್ಯದ ಬಳಿಕ​ ಶಾಕಿಂಗ್​ ಹೇಳಿಕೆ ಕೊಟ್ಟ ರಿಷಭ್​

ಅರುಣ್​ ಜೇಟ್ಲಿ ಕ್ರೀಡಾಂಗನದಲ್ಲಿ ನಡೆದ 17ನೇ ಆವೃತ್ತಿಯ 64ನೇ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಲಖನೌ ಸೂಪರ್​ಜೈಂಟ್ಸ್​ ವಿರುದ್ಧ ಜಯ ಸಾಧಿಸಿದ್ದು, ಪ್ಲೇಆಫ್​ ಆಸೆಯನ್ನು ಸ್ವಲ್ಪಮಟ್ಟಿಗೆ ಜೀವಂತವಾಗಿರಿಸಿಕೊಂಡಿದೆ.
01:52 PM May 15, 2024 IST | Ashitha S
ಲಖನೌ ವಿರುದ್ಧದ ಪಂದ್ಯದ ಬಳಿಕ​ ಶಾಕಿಂಗ್​ ಹೇಳಿಕೆ ಕೊಟ್ಟ ರಿಷಭ್​

ನವದೆಹಲಿ: ಅರುಣ್​ ಜೇಟ್ಲಿ ಕ್ರೀಡಾಂಗನದಲ್ಲಿ ನಡೆದ 17ನೇ ಆವೃತ್ತಿಯ 64ನೇ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಲಖನೌ ಸೂಪರ್​ಜೈಂಟ್ಸ್​ ವಿರುದ್ಧ ಜಯ ಸಾಧಿಸಿದ್ದು, ಪ್ಲೇಆಫ್​ ಆಸೆಯನ್ನು ಸ್ವಲ್ಪಮಟ್ಟಿಗೆ ಜೀವಂತವಾಗಿರಿಸಿಕೊಂಡಿದೆ.

Advertisement

ಇನ್ನೂ ಪಂದ್ಯದ ಬಳಿಕ ಮಾತನಾಡಿದ ರಿಷಭ್​ ಪಂತ್​ ಅಚ್ಚರಿಯ ಹೇಳಿಕೆ ಕೋಡುವ ಮೂಲಕ ಸುದ್ದಿಯಾಗಿದ್ದಾರೆ.

ನಿಯಮ ಉಲ್ಲಂಘನೆ ಕಾರಣ ರಿಷಭ್​ ಪಂತ್​ಗೆ ಬಿಸಿಸಿಐ ದಂಡ ವಿಧಿಸಿ ಒಂದು ಪಂದ್ಯ ಆಡದಂತೆ ನಿಷೇಧ ಹೇರಿತ್ತು. ಈ ಕಾರಣಕ್ಕಾಗಿ ಅವರು ಆರ್​ಸಿಬಿ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಲಖನೌ ವಿರುದ್ಧದ ಗೆಲುವಿನ ಬಳಿಕ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿದ ರಿಷಭ್​ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ನಾನು ಕಣಕ್ಕಿಳಿದಿದ್ದರೆ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತಿತ್ತು. ನಾನು ಆಡಿದ್ದರೆ ನಾವು ಖಂಡಿತವಾಗಿಯೂ ಪಂದ್ಯವನ್ನು ಗೆಲ್ಲುತ್ತಿದ್ದೆವು ಎಂದು ನಾನು ಹೇಳುತ್ತಿಲ್ಲ. ಆದರೆ, ಕೊನೆಯ ಪಂದ್ಯದಲ್ಲಿ ನನಗೆ ಆಡಲು ಅವಕಾಶವಿದ್ದರೆ ನಮಗೆ ಪ್ಲೇ ಆಫ್​ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶವಿತ್ತು ಎಂದು ಪರೋಕ್ಷವಾಗಿ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Advertisement

ಒಂದೂವರೆ ವರ್ಷದ ನಂತರ ಕ್ರಿಕೆಟ್​ಗೆ ಮರಳಿದ್ದೇನೆ. ನಾನು ಸದಾ ಮೈದಾನದಲ್ಲಿ ಇರಲು ಬಯಸುತ್ತೇನೆ ಎಂದು ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ರಿಷಭ್​ ಪಂತ್​ ಹೇಳಿದ್ದಾರೆ.

Advertisement
Tags :
Advertisement