For the best experience, open
https://m.newskannada.com
on your mobile browser.
Advertisement

ಮಂಗಳೂರಿನ ವಜ್ರದೇಹಿ ಕೋಲದಲ್ಲಿ ರಿಷಬ್ ಭಾಗಿ

ಮಂಗಳೂರಿನ ವಜ್ರದೇಹಿ ಮಠದ ದೈವ ಕೋಲದಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿದ್ದು, ಈ ಹಿಂದೆ ವಜ್ರದೇಹಿ ಸ್ವಾಮೀಜಿ ಭೇಟಿಯಾದ ಸಂದರ್ಭದಲ್ಲಿ ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ಇಚ್ಛೆಯನ್ನು ಹೇಳಿಕೊಂಡಿದ್ದರು. ಹೀಗಾಗಿ ಕೋಲಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿಯನ್ನು ಆಹ್ವಾನಿಸಿದ್ದರು.
12:02 PM Jan 06, 2024 IST | Gayathri SG
ಮಂಗಳೂರಿನ ವಜ್ರದೇಹಿ ಕೋಲದಲ್ಲಿ ರಿಷಬ್ ಭಾಗಿ

ಮಂಗಳೂರು: ಮಂಗಳೂರಿನ ವಜ್ರದೇಹಿ ಮಠದ ದೈವ ಕೋಲದಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿದ್ದು, ಈ ಹಿಂದೆ ವಜ್ರದೇಹಿ ಸ್ವಾಮೀಜಿ ಭೇಟಿಯಾದ ಸಂದರ್ಭದಲ್ಲಿ ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ಇಚ್ಛೆಯನ್ನು ಹೇಳಿಕೊಂಡಿದ್ದರು. ಹೀಗಾಗಿ ಕೋಲಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿಯನ್ನು ಆಹ್ವಾನಿಸಿದ್ದರು.

Advertisement

ಈ ವೇಳೆ ‘ಧೈರ್ಯ ಕಳೆದುಕೊಳ್ಳದಂತೆ, ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ಹಿಂದೆ ನಾನಿದ್ದೇನೆ’ ಎಂದು ದೈವ ಸೂಚನೆ ನೀಡಿದೆ ಎನ್ನಲಾಗಿದೆ. ‘ಕಾಂತಾರ’ ಶೂಟಿಂಗ್ ಸಂದರ್ಭದಲ್ಲೂ ದೈವದ ಅಭಯ ಚಿತ್ರಕ್ಕೆ ಸಿಕ್ಕಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಸಂದರ್ಭದಲ್ಲೂ ಧನಾತ್ಮಕ ಪ್ರಕ್ರಿಯೆ ಸಿಕ್ಕಿದೆ.

ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಪಂಜಾಬಿ ಭಾಷೆಯಲ್ಲಿ ಸಿನಿಮಾ ಮೂಡಿಬರುತ್ತಿದೆ.

Advertisement

Advertisement
Tags :
Advertisement