For the best experience, open
https://m.newskannada.com
on your mobile browser.
Advertisement

ಅಂಗಾಂಗ ದಾನ ಪ್ರತಿಜ್ಞೆ ಮಾಡಿದ ಬಾಲಿವುಡ್ ಸ್ಟಾರ್​ ಜೋಡಿ

ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಜೆನಿಲಿಯಾ ಡಿಸೋಜಾ ಹಾಗು ರಿತೇಷ್ ದೇಶ್​ಮುಖ್ ಕೂಡ ಒಬ್ಬರು. ಇಬ್ಬರೂ ಪ್ರೀತಿಸಿ ಮದುವೆ ಆದವರು.  ಈ ಸೆಲೆಬ್ರಿಟಿ ಜೋಡಿ ಅಂಗಾಗ ದಾನ ಮಾಡುವ ಘೋಷಣೆ ಮಾಡಿದ್ದಾರೆ.
12:35 PM Jul 08, 2024 IST | Ashitha S
ಅಂಗಾಂಗ ದಾನ ಪ್ರತಿಜ್ಞೆ ಮಾಡಿದ ಬಾಲಿವುಡ್ ಸ್ಟಾರ್​ ಜೋಡಿ

ಮುಂಬೈ: ಬಾಲಿವುಡ್​ನ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಜೆನಿಲಿಯಾ ಡಿಸೋಜಾ ಹಾಗು ರಿತೇಷ್ ದೇಶ್​ಮುಖ್ ಕೂಡ ಒಬ್ಬರು. ಇಬ್ಬರೂ ಪ್ರೀತಿಸಿ ಮದುವೆ ಆದವರು.  ಈ ಸೆಲೆಬ್ರಿಟಿ ಜೋಡಿ ಅಂಗಾಗ ದಾನ ಮಾಡುವ ಘೋಷಣೆ ಮಾಡಿದ್ದಾರೆ.

Advertisement

ಈ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ದಂಪತಿಗೆ ಧನ್ಯವಾದ ಹೇಳಿದೆ. ರಿತೇಷ್ ಅವರ ವಿಡಿಯೋನ ಇವರು ಪೋಸ್ಟ್ ಮಾಡಿದ್ದಾರೆ.

ಬದುಕಿದ್ದಾಗಲೇ ಅಂಗಾಗ ದಾನಕ್ಕೆ ಸಹಿ ಹಾಕಬೇಕು. ಈ ರೀತಿ ಸಹಿ ಹಾಕಿದ ವ್ಯಕ್ತಿ ನಿಧನ ಹೊಂದಿದ ಬಳಿಕ ಕಣ್ಣು ಮೊದಲಾದ ಅಂಗಾಗಳನ್ನು ಪಡೆಯಲಾಗುತ್ತದೆ. ಇದನ್ನು ಅಗತ್ಯ ಇರೋ ವ್ಯಕ್ತಿಗಳಿಗೆ ನೀಡಲಾಗುತ್ತದೆ. ರಿತೇಷ್ ಹಾಗೂ ಜೆನಿಲಿಯಾ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

Advertisement

ಈ ಮೊದಲು ರಿತೇಷ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ನಾನು ಹಾಗೂ ಜೆನಿಲಿಯಾ ನಮ್ಮ ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇವೆ’ ಎಂದು ರಿತೇಷ್ ಹೇಳಿದ್ದರು. ಈ ವಿಚಾರವನ್ನು ಜೆನಿಲಿಯಾ ಕೂಡ ಖಚಿತಪಡಿಸಿದ್ದರು. ಈ ವಿಡಿಯೋನ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಹಂಚಿಕೊಂಡಿದೆ. ‘ರಿತೇಷ್ ಹಾಗೂ ಜೆನಿಲಿಯಾ ದಂಪತಿಗೆ ಧನ್ಯವಾದಗಳು. ಅವರು ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಇವರ ನಿರ್ಧಾರ ಅನೇಕರಿಗೆ ಸ್ಫೂರ್ತಿದಾಯಕವಾಗಲಿ’ ಎಂದು ಬರೆಯಲಾಗಿದೆ.

Advertisement
Tags :
Advertisement