ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಮೆರಿಕದ ರಾಬಿನ್​ಹುಡ್ ಕಂಪನಿ ಕಟ್ಟಿದ ಬೈಜು ಭಟ್ ರಾಜೀನಾಮೆ

ಅಮೆರಿಕದ ಟ್ರೇಡಿಂಗ್ ಕಂಪನಿಯಾದ ರಾಬಿನ್​ಹುಡ್ ಮಾರ್ಕೆಟ್ಸ್​ನ ಸಹ-ಸಂಸ್ಥಾಪಕ ಬೈಜು ಭಟ್ ತಮ್ಮ ಚೀಫ್ ಕ್ರಿಯೇಟಿವ್ ಆಫೀಸರ್ ಸ್ಥಾನದಿಂದ ಕೆಳಗಿಳಿದಿದ್ದಾರೆ.
11:18 AM Mar 22, 2024 IST | Ashitha S

ಕ್ಯಾಲಿಫೋರ್ನಿಯಾ: ಅಮೆರಿಕದ ಟ್ರೇಡಿಂಗ್ ಕಂಪನಿಯಾದ ರಾಬಿನ್​ಹುಡ್ ಮಾರ್ಕೆಟ್ಸ್​ನ ಸಹ-ಸಂಸ್ಥಾಪಕ ಬೈಜು ಭಟ್ ತಮ್ಮ ಚೀಫ್ ಕ್ರಿಯೇಟಿವ್ ಆಫೀಸರ್ ಸ್ಥಾನದಿಂದ ಕೆಳಗಿಳಿದಿದ್ದಾರೆ.

Advertisement

ಒಂದು ದಶಕದ ಕಾಲ ಕಂಪನಿಯ ಉನ್ನತ ಹುದ್ದೆಯಲ್ಲಿದ್ದು ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಮೂಲದ ಬೈಜು ಭಟ್ ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಕೆಲ ವರದಿ ಪ್ರಕಾರ ಅವರು ಬೇರೆ ಬಿಸಿನೆಸ್​ಗಳನ್ನು ಆರಂಭಿಸುವ ಸಲುವಾಗಿ ರಾಬಿನ್​ಹುಡ್ ಮಾರ್ಕೆಟ್ಸ್​ನಿಂದ ನಿರ್ಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬೈಜು ಭಟ್ ಅವರು ರಾಬಿನ್​ಹುಡ್​ನ ನಿರ್ದೇಶಕ ಮಂಡಳಿಯಲ್ಲಿ ಸದಸ್ಯರಾಗಿ ಮುಂದುವರಿಯಲಿದ್ದಾರೆ. ವ್ಲಾದಿಮಿರ್ ಟೆನೆವ್ ಸಿಇಒ ಆಗಿ ಮುಂದುವರಿಯಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಬೈಜು ಪ್ರಫುಲ್​ಕುಮಾರ್ ಭಟ್ ಅಮೆರಿಕದ ವರ್ಜೀನಿಯಾ ರಾಜ್ಯದಲ್ಲಿ ಹುಟ್ಟಿ ಬೆಳೆದವರು. ಇವರ ತಂದೆ ಮತ್ತು ತಾಯಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ನೆಲಸಿದವರು. ಬೈಜು ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸ್ಟಾನ್​ಫೋರ್ಡ್​ನಲ್ಲಿ ಓದುವಾಗ ಸಹಪಾಠಿಯಾಗಿದ್ದ ಬಲ್ಗೇರಿಯಾ ಮೂಲದ ವ್ಲಾದಿಮಿರ್ ಟೆನೆವ್ ಅವರ ಜೊತೆ ಸೇರಿ 2013ರಲ್ಲಿ ರಾಬಿನ್​ಹುಡ್ ಎಂಬ ಟ್ರೇಡಿಂಗ್ ಪ್ಲಾಟ್​ಫಾರ್ಮ್ ಆರಂಭಿಸಿದರು.

Advertisement

Advertisement
Tags :
Baiju BhattindiaLatestNewsNewsKannadaRobinhood Marketsನವದೆಹಲಿಬೈಜು ಭಟ್ರಾಬಿನ್​ಹುಡ್
Advertisement
Next Article