ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇತಿಹಾಸ ನಿರ್ಮಿಸಿದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಜೋಡಿ

ಭಾರತದ ಹಿರಿಯ ಟೆನಿಸಿಗ, ಡಬಲ್ಸ್​ ವಿಶ್ವ ನಂ.1 ಆಟಗಾರ, ಕನ್ನಡಿಗ ರೋಹನ್​ ಬೋಪಣ್ಣ ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯಲ್ಲಿ ಅಭೂತಪೂರ್ವ ಸಾಧನೆ ತೋರಿದ್ದಾರೆ. ಪರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.
07:58 PM Jan 27, 2024 IST | Ashika S

ಮೆಲ್ಬೋರ್ನ್​: ಭಾರತದ ಹಿರಿಯ ಟೆನಿಸಿಗ, ಡಬಲ್ಸ್​ ವಿಶ್ವ ನಂ.1 ಆಟಗಾರ, ಕನ್ನಡಿಗ ರೋಹನ್​ ಬೋಪಣ್ಣ ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯಲ್ಲಿ ಅಭೂತಪೂರ್ವ ಸಾಧನೆ ತೋರಿದ್ದಾರೆ. ಪರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

Advertisement

ಈ ಮೂಲಕ ಓಪನ್​ ಯುಗದಲ್ಲಿ ಗ್ರ್ಯಾನ್‌ ಸ್ಲಾಮ್‌ ಟ್ರೋಫಿ ಗೆದ್ದ ಅತಿ ಹಿರಿಯ ಟೆನಿಸಿಗ ಎನಿಸಿಕೊಂಡರು.

ಶನಿವಾರ ನಡೆದ ಜಿದ್ದಾಜಿದ್ದಿನ ಪುರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಸೇರಿಕೊಂಡು ಇಟಲಿಯ ಸಿಮೋನ್​ ಬೊಲೆಲ್ಲಿ-ಆಯಂಡ್ರಿಯಾ ವಸಸ್ಸೊರಿ ವಿರುದ್ಧ 7-6(7-0), 7-5 ನೇರ ಸೆಟ್​ಗಳಿಂದ ಗೆಲುವು ಸಾಧಿಸಿದರು.

Advertisement

ಪರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಎತ್ತಿ ಹಿಡಿದಿ ರೋಹನ್​ ಭೂಪಣ್ಣ ಸಾಧನೆಗೆ ಕ್ರಿಕೆಟ್​ ದೇವರು ಸಚಿನ್​, ವೀರೇಂದ್ರ ಸೆಹ್ವಾಗ್​, ಕನ್ನಡಿಗ ವೆಂಕಟೇಶ್​ ಪ್ರಸಾದ್​ ಸೇರಿದಂತೆ ಹಲವು ತಾರೆಯರು ಅಭಿನಂದನೆ ಸಲ್ಲಿಸಿದ್ದಾರೆ. ಈ ಗೆಲುವಿನೊಂದಿಗೆ ಅವರು 2 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದಾರೆ.

ರೋಹನ್‌ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡನ್‌ ತಂಡವಾಗಿ ಗೆದ್ದ ಮೊದಲ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಇದಾಗಿದೆ. ಇದು ರೋಹನ್‌ ಬೋಪಣ್ಣ ಅವರ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಪ್ರಶಸ್ತಿಯಾಗಿದೆ. ಅದಲ್ಲದೆ ಈ ಗೆಲುವು ಅವರ 43ನೇ ವಯಸ್ಸಿನಲ್ಲಿ ಬಂದಿರುವುದು ಇನ್ನಷ್ಟು ವಿಶೇಷವಾಗಿದೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ರೋಹನ್‌ ಬೋಪಣ್ಣ, ನಾನು 43 ವರ್ಷದ ವ್ಯಕ್ತಿ ಎಂದು ಹೇಳಿಕೊಳ್ಳೋದಿಲ್ಲ. ನಾನು 43ನೇ ಹಂತದಲ್ಲಿದ್ದೇನಷ್ಟೇ ಎಂದು ತಿಳಿಸಿದ್ದಾರೆ.

Advertisement
Tags :
LatetsNewsNewsKannadaಆಸ್ಟ್ರೇಲಿಯಾಓಪನ್​ ಟೆನಿಸ್​ಟೂರ್ನಿಪ್ರಶಸ್ತಿರೋಹನ್ ಬೋಪಣ್ಣ
Advertisement
Next Article