For the best experience, open
https://m.newskannada.com
on your mobile browser.
Advertisement

ಮತ್ತೊಂದು ಹಂತ ತಲುಪಿದ ರೋಹಿತ್​-ಹಾರ್ದಿಕ್​ ನಡುವಿನ ಕಿತ್ತಾಟ

17ನೇ ಆವೃತ್ತಿ ಐಪಿಎಲ್​ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಆದರೆ, ಮುಂಬೈ ಇಂಡಿಯನ್ಸ್​ ತಂಡದಲ್ಲಿ ಯಾಕೋ ಎಲ್ಲವೂ ಸರಿ ಇಲ್ಲ ಎಂಬಂತೆ ಕಾಣುತ್ತಿದೆ. ಈ ಹಿಂದೆ ನಾಯಕತ್ವದ ವಿಚಾರವಾಗಿ ಸದ್ದು ಮಾಡಿದ್ದ ರೋಹಿತ್​ ಹಾಗೂ ಹಾರ್ದಿಕ್​ ನಡುವಿನ ಕಿತ್ತಾಟ ಇದೀಗ ಮತ್ತೊಂದು ಬೇರೊಂದು ವಿಷಯಕ್ಕೆ ಎಲ್ಲರ ಗಮನ ಸೆಳೆದಿದೆ.
05:49 PM Feb 08, 2024 IST | Gayathri SG
ಮತ್ತೊಂದು ಹಂತ ತಲುಪಿದ ರೋಹಿತ್​ ಹಾರ್ದಿಕ್​ ನಡುವಿನ ಕಿತ್ತಾಟ

ಮುಂಬೈ: 17ನೇ ಆವೃತ್ತಿ ಐಪಿಎಲ್​ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಆದರೆ, ಮುಂಬೈ ಇಂಡಿಯನ್ಸ್​ ತಂಡದಲ್ಲಿ ಯಾಕೋ ಎಲ್ಲವೂ ಸರಿ ಇಲ್ಲ ಎಂಬಂತೆ ಕಾಣುತ್ತಿದೆ. ಈ ಹಿಂದೆ ನಾಯಕತ್ವದ ವಿಚಾರವಾಗಿ ಸದ್ದು ಮಾಡಿದ್ದ ರೋಹಿತ್​ ಹಾಗೂ ಹಾರ್ದಿಕ್​ ನಡುವಿನ ಕಿತ್ತಾಟ ಇದೀಗ ಮತ್ತೊಂದು ಬೇರೊಂದು ವಿಷಯಕ್ಕೆ ಎಲ್ಲರ ಗಮನ ಸೆಳೆದಿದೆ.

Advertisement

ಕೆಲ ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮ ಒಂದರ ಸಂದರ್ಶನದಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್​ ಮುಖ್ಯ ಕೋಚ್​ ಮಾರ್ಕ್​ ಬೌಷರ್​ ಸಹ ಫ್ರಾಂಚೈಸಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಬಳಿಕ ರೋಹಿತ್​ ಪತ್ನಿ ರಿತಿಕಾ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಮೂಲಕ ತಿರುಗೇಟು ನೀಡಿದ್ದರು.

ಇದೀಗ ಕೇಳಿ ಬಂದಿರುವ ಹೊಸ ವಿಚಾರ ಏನೆಂದರೆ ರೋಹಿತ್​ ಶರ್ಮಾ ಹಾಗೂ ಹಾರ್ದಿಕ್​ ಪಾಂಡ್ಯ ಇಬ್ಬರು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅನ್​ಫಾಲೋ ಮಾಡಿದ್ದಾರೆ ಎಂದು ಕೇಳಿ ಬರುತ್ತಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಒಂದನ್ನು ಹುಟ್ಟು ಹಾಕಿದ್ದು, ರೋಹಿತ್​ ಹಾಗೂ ಹಾರ್ದಿಕ್​ ಅಭಿಮಾನಿಗಳ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ.

Advertisement

Advertisement
Tags :
Advertisement