For the best experience, open
https://m.newskannada.com
on your mobile browser.
Advertisement

ಐಪಿಎಲ್ ಪ್ರಸಾರಕರ ಹಿಟ್​ಮ್ಯಾನ್​ ರೋಹಿತ್​ ಕಿಡಿ

ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ರೋಹಿತ್​ ಅವರು ಧವಳ್ ಕುಲಕರ್ಣಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು.
06:25 PM May 19, 2024 IST | Nisarga K
ಐಪಿಎಲ್ ಪ್ರಸಾರಕರ ಹಿಟ್​ಮ್ಯಾನ್​ ರೋಹಿತ್​ ಕಿಡಿ
ಐಪಿಎಲ್ ಪ್ರಸಾರಕರ ಹಿಟ್​ಮ್ಯಾನ್​ ರೋಹಿತ್​ ಕಿಡಿ

ಮುಂಬೈ: ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ರೋಹಿತ್​ ಅವರು ಧವಳ್ ಕುಲಕರ್ಣಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ಇದನ್ನು ರೆಕಾರ್ಡ್​ ಮಾಡುತ್ತಿರುವ ಕ್ಯಾಮೆರಾಮನ್​ಗೆ ಆಡಿಯೊ ಆಫ್​ ಮಾಡಿ ಎಂದು ಕೋರಿಕೊಂಡಿದ್ದರು. ಆದರೂ ಕೂಡ ಆಡಿಯೊ ರೆಕಾರ್ಡ್​ ಮಾಡಿ ಈ ತುಣುಕನ್ನು ಹರಿ ಬಿಟ್ಟು ಖಾಸಗಿತನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ರೋಹಿತ್‌, ನ್ನ ವಿನಂತಿಯ ಹೊರತಾಗಿಯೂ, ಸ್ಟಾರ್ ಸ್ಪೋರ್ಟ್ಸ್ ನಾನು ತಂಡದ ಸಹ ಆಟಗಾರರು ಮತ್ತು ಸಹೋದ್ಯೋಗಿಗಳೊಂದಿಗೆ ಆಡಿದ ವೈಯಕ್ತಿಕ ಮಾತುಕತೆಗಳ ಆಡಿಯೊ ಮತ್ತು ವಿಡಿಯೊ ತುಣುಕನ್ನು ಹಂಚಿಕೊಳ್ಳುವುದನ್ನು ಸ್ಟಾರ್ ಸ್ಪೋರ್ಟ್ಸ್ ಮುಂದುವರೆಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್​ ಹುಟ್ಟಿಸುವ ಸಲುವಾಗಿ ಪ್ರಸಾರಕರು ಈ ರೀತಿ ಕ್ರಿಕೆಟಿಗರ ಗೌಪ್ಯತೆಗೆ ಅಡ್ಡಿಪಡಿಸುವುದು ಸರಿಯಲ್ಲ ಲ್ಪವಾದರೂ ಸಾಮಾನ್ಯ ಜ್ಞಾನ ಇರಬೇಕು” ಎಂದು ಟ್ವೀಟ್​ ಮೂಲಕ ಆರೋಪಿಸಿದ್ದಾರೆ.

Advertisement
Advertisement
Tags :
Advertisement