For the best experience, open
https://m.newskannada.com
on your mobile browser.
Advertisement

‘ಪಪ್ಪಾ ಇನ್ನೊಂದು ತಿಂಗಳಲ್ಲಿ ನಗುತ್ತಾರೆʼ: ರೋಹಿತ್ ಪುತ್ರಿಯ ವಿಡಿಯೋ ವೈರಲ್

ಮುಂಬೈ:  ವಿಶ್ವಕಪ್​ ಸೋತಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣ್ಣೀರು ಸುರಿಸುತ್ತಾ ಡ್ರೆಸ್ಸಿಂಗ್ ರೂಮ್​​ಗೆ ಹೆಜ್ಜೆ ಹಾಕಿದ್ದರು. ಪಂದ್ಯ ಮುಗಿದು 5 ದಿನ ಕಳೆದರೂ ಆ ಬೇಸರದಿಂದ ಹೊರಬಂದಿಲ್ಲ.
02:44 PM Nov 24, 2023 IST | Ashitha S
‘ಪಪ್ಪಾ ಇನ್ನೊಂದು ತಿಂಗಳಲ್ಲಿ ನಗುತ್ತಾರೆʼ  ರೋಹಿತ್ ಪುತ್ರಿಯ ವಿಡಿಯೋ ವೈರಲ್

ಮುಂಬೈ: ವಿಶ್ವಕಪ್​ ಸೋತಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣ್ಣೀರು ಸುರಿಸುತ್ತಾ ಡ್ರೆಸ್ಸಿಂಗ್ ರೂಮ್​​ಗೆ ಹೆಜ್ಜೆ ಹಾಕಿದ್ದರು. ಪಂದ್ಯ ಮುಗಿದು 5 ದಿನ ಕಳೆದರೂ ಆ ಬೇಸರದಿಂದ ಹೊರಬಂದಿಲ್ಲ.

Advertisement

ಈ ಬಗ್ಗೆ ಸ್ವತಃ ರೋಹಿತ್ ಪುತ್ರಿ ಸಮೈರಾ ಹೇಳಿಕೆ ನೀಡಿದ್ದಾಳೆ ಎನ್ನಲಾಗುತ್ತಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಒಬ್ಬರು ಆಕೆಯನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ.

ನಿಮ್ಮ ತಂದೆ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಮಾತಿಗೆ ನಿಂತು ಮಾತನಾಡಿದ ಪುಟಾಣಿ, ಅವರು ರೂಮಿನಲ್ಲಿ ಇದ್ದಾರೆ. ಚೆನ್ನಾಗಿಯೇ ಇದ್ದಾರೆ. ಇನ್ನೊಂದು ತಿಂಗಳಲ್ಲಿ ನಗುತ್ತಾರೆ ಎಂದು ಕ್ಯೂಟ್​ ಆಗಿ ಹೇಳಿದ್ದಾಳೆ. ಅಂದಹಾಗೆ ಈ ವಿಡಿಯೋ ಒಂದು ವರ್ಷದ ಹಿಂದಿನದ್ದಾಗಿದೆ. ವಿಶ್ವಕಪ್​ ಸೋಲಿನ ಬೆನ್ನಲ್ಲೇ ಈ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

Advertisement
Tags :
Advertisement