For the best experience, open
https://m.newskannada.com
on your mobile browser.
Advertisement

ʼಟಿ20 ವಿಶ್ವಕಪ್‌ಗಾಗಿ ಇದೆಲ್ಲಾʼ ಎಂದು ಡಿಕೆ ಕಾಲೆಳೆದ ರೋಹಿತ್; ವಿಡಿಯೋ ವೈರಲ್

ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಸ್ಪೋಟಕ ಅರ್ಧಶತಕದ ನೆರವಿನಿಂದ ಇನ್ನೂ 27 ಎಸೆತ ಬಾಕಿ ಇರುವಂತೆಯೇ ಅನಾಯಾಸವಾಗಿ ಗೆಲುವಿನ ನಗೆ ಬೀರಿದೆ.
04:35 PM Apr 12, 2024 IST | Ashitha S
ʼಟಿ20 ವಿಶ್ವಕಪ್‌ಗಾಗಿ ಇದೆಲ್ಲಾʼ ಎಂದು ಡಿಕೆ ಕಾಲೆಳೆದ ರೋಹಿತ್  ವಿಡಿಯೋ ವೈರಲ್

ಮುಂಬೈ: ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಸ್ಪೋಟಕ ಅರ್ಧಶತಕದ ನೆರವಿನಿಂದ ಇನ್ನೂ 27 ಎಸೆತ ಬಾಕಿ ಇರುವಂತೆಯೇ ಅನಾಯಾಸವಾಗಿ ಗೆಲುವಿನ ನಗೆ ಬೀರಿದೆ.

Advertisement

ಇನ್ನು ಮುಂಬೈ ಇಂಡಿಯನ್ಸ್‌ನ ಬ್ಯಾಟರ್ ರೋಹಿತ್ ಶರ್ಮಾ, ಮೈದಾನದಲ್ಲಿ ಕಾಲೆಳೆಯುವುದರಲ್ಲಿ ಎತ್ತಿದ ಕೈ. ಇದೀಗ ಆರ್‌ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯದ ವೇಳೆ ರೋಹಿತ್ ಶರ್ಮಾ, ಅರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರನ್ನು ಸ್ಲೆಡ್ಜಿಂಗ್ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ʼಇವರಿಗೆ ವಿಶ್ವಕಪ್ ಸೆಲೆಕ್ಷನ್‌ಗಾಗಿ ಆಡಬೇಕಾಗಿದೆ. ಶಬ್ಬಾಶ್. ಇವರ ತಲೆಯಲ್ಲಿ ವಿಶ್ವಕಪ್ ಅವರದ್ದೇ ಚಿಂತಿಸುತ್ತಿದ್ದಾರೆ. ಶಬ್ಬಾಶ್ ಡಿಕೆ. ನೀವಂತೂ ವಿಶ್ವಕಪ್ ಆಡಲೇಬೇಕು ಡಿಕೆʼ ಎಂದು ರೋಹಿತ್ ಶರ್ಮಾ ಹೇಳಿರುವುದು ಸ್ಟಂಪ್‌ ಮೈಕ್‌ನಲ್ಲಿ ಸೆರೆಯಾಗಿದೆ.

Advertisement

ಇನ್ನು 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ಜೂನ್ ತಿಂಗಳಿನಲ್ಲಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಶುರುವಾಗಲಿದೆ. ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಈ ಟೂರ್ನಿಗೆ ಮುಂಬರುವ ಮೇ ತಿಂಗಳಿನಲ್ಲಿ ಭಾರತ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಲಿದೆ.

Advertisement
Tags :
Advertisement