ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮುಂಬೈ ಇಂಡಿಯನ್ಸ್​​ ತೊರೆಯಲು ಮುಂದಾದ ರೋಹಿತ್ ಶರ್ಮಾ

ರೋಹಿತ್ ಶರ್ಮಾ 2011 ರಿಂದ ತಂಡದ ಭಾಗವಾಗಿ, ಐದು ಬಾರಿ ಟ್ರೋಫಿ ಗೆಲ್ಲಿಸಿ, ದೊಡ್ಡ ಸಕ್ಸಸ್​ ತಂದುಕೊಟ್ಟಿದ್ದಾರೆ. ಇದೀಗ ಚಾಂಪಿಯನ್ ಕ್ಯಾಪ್ಟನ್​ ಮುಂಬೈ ಇಂಡಿಯನ್ಸ್​​​ ತಂಡ ತೊರೆಯಲು ನಿರ್ಧರಿಸಿದ್ದಾರೆ.
03:40 PM Apr 05, 2024 IST | Chaitra Kulal

ರೋಹಿತ್ ಶರ್ಮಾ 2011 ರಿಂದ ತಂಡದ ಭಾಗವಾಗಿ, ಐದು ಬಾರಿ ಟ್ರೋಫಿ ಗೆಲ್ಲಿಸಿ, ದೊಡ್ಡ ಸಕ್ಸಸ್​ ತಂದುಕೊಟ್ಟಿದ್ದಾರೆ. ಇದೀಗ ಚಾಂಪಿಯನ್ ಕ್ಯಾಪ್ಟನ್​ ಮುಂಬೈ ಇಂಡಿಯನ್ಸ್​​​ ತಂಡ ತೊರೆಯಲು ನಿರ್ಧರಿಸಿದ್ದಾರೆ.

Advertisement

ಈ ಐಪಿಎಲ್​​​​​​​​​​​​​​​​ ಹಿಟ್​ಮ್ಯಾನ್ ಪಾಲಿಗೆ ಮುಂಬೈ ಪರ ಕೊನೆ ಐಪಿಎಲ್​​​. 2024ನೇ ಐಪಿಎಲ್ ಮುಗಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್​​ಗೆ ಗುಡ್​​ ಬೈ ಹೇಳಲಿದ್ದಾರೆ ಎಂದು ವರದಿಯಾಗಿದೆ. ರೋಹಿತ್​ರ ಈ ನಡೆಯಿಂದ ಫ್ಯಾನ್ಸ್​​​ ಆಘಾತಕ್ಕೊಳಗಾಗಿದ್ದಾರೆ.

ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್​​ಗೆ ಸುದೀರ್ಘ 14 ವರ್ಷಗಳ ಸಂಬಂಧ ಇದ್ದು, ಈ ಸಂಬಂಧಕ್ಕೆ ಪುಲ್​ಸ್ಟಾಪ್​​ ಹಾಕಲು ಹಿಟ್​ಮ್ಯಾನ್​ ಮುಂದಾಗಿದ್ದಾರೆ. ಐಪಿಎಲ್​ ಬಳಿಕ ಮುಂಬೈಗೆ ಗುಡ್​​​ಬೈ ಹೇಳಲು ಸಜ್ಜಾಗಿರೋ ರೋಹಿತ್​ ಶರ್ಮಾ, 2025ರ ಹರಾಜಿನ ಮೇಲೆ ಕಣ್ಣಿಟ್ಟಿದ್ದಾರೆ.

Advertisement

ಈ ವರ್ಷಾಂತ್ಯದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ರೋಹಿತ್​ ಹೆಸರನ್ನ ನೋಂದಾಯಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಚಾಂಪಿಯನ್ ಕ್ಯಾಪ್ಟನ್​​ ಹರಾಜಿಗೆ ಹೋದ್ರೆ ದೊಡ್ಡ ಜಾಕಾಪಾಟ್​ ಹೊಡೆಯಲಿದೆ. ಯಾಕಂದ್ರೆ ಮುಂಬೈಗೆ 5 ಸಲ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ರೋಹಿತ್ ಕೊಂಡುಕೊಳ್ಳಲು ಫ್ರಾಂಚೈಸಿಗಳು ಮುಗಿಬೀಳಲಿವೆ.

ಬರೀ ರೋಹಿತ್​ ಶರ್ಮಾ ಮಾತ್ರವಲ್ಲ. ಸ್ಟಾರ್ ಬೌಲರ್​​ ಜಸ್​ಪ್ರೀತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್​​ ಕೂಡ ತಂಡ ತೊರೆಯಲು ಸಜ್ಜಾಗಿದ್ದಾರೆ. ಈ ಬಗ್ಗೆ ಈಗಾಗ್ಲೇ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಗ್​​​ -3 ಗಳು ಮುಂಬೈ ತಂಡ ಬಿಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Advertisement
Tags :
IPLLatestNewsMUMBAI INDIANSNewsKarnatakaRohit Sharma)
Advertisement
Next Article