For the best experience, open
https://m.newskannada.com
on your mobile browser.
Advertisement

ಗಂಗೂಲಿಯ ದಾಖಲೆ ಧೂಳಿಪಟ ಮಾಡಿದ ಹಿಟ್​ಮ್ಯಾನ್

ಇಂಗ್ಲೆಂಡ್​ ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಅವರು ಮಾಜಿ ನಾಯಕ ಸೌರವ್​ ಗಂಗೂಲಿಯ ದಾಖಲೆಯೊಂದನ್ನು ಮುರಿದಿದ್ದಾರೆ.
04:35 PM Feb 15, 2024 IST | Ashitha S
ಗಂಗೂಲಿಯ ದಾಖಲೆ ಧೂಳಿಪಟ ಮಾಡಿದ ಹಿಟ್​ಮ್ಯಾನ್

ರಾಜ್​ಕೋಟ್​: ಇಂಗ್ಲೆಂಡ್​ ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಅವರು ಮಾಜಿ ನಾಯಕ ಸೌರವ್​ ಗಂಗೂಲಿಯ ದಾಖಲೆಯೊಂದನ್ನು ಮುರಿದಿದ್ದಾರೆ.

Advertisement

ನಿರಂಜನ್​ ಶಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರೋಹಿತ್​ ಶರ್ಮ 65 ರನ್ ಗಡಿ ದಾಟುತ್ತಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡರು. ಇದೇ ವೇಳೆ ದಂತಕಥೆ ಸೌರವ್ ಗಂಗೂಲಿ ಅವರ ದಾಖಲೆ ಪತನಗೊಂಡಿತು.

ಗಂಗೂಲಿ 424 ಪಂದ್ಯಗಳನ್ನು ಆಡುವ ಮೂಲಕ 18575 ರನ್ ಗಳಿಸಿದ್ದರು. ಇದೀಗ ರೋಹಿತ್ ಶರ್ಮಾ ಅವರು 470 ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 18600* ರನ್​ ಬಾರಿಸಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರು. ಸಾರ್ವಕಾಲಿಕ ದಾಖಲೆ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ತೆಂಡೂಲ್ಕರ್ ಅವರು ತಮ್ಮ ಎರಡು ದಶಕಗಳ ಕ್ರಿಕೆಟ್​ ವೃತ್ತಿಜೀವನದಲ್ಲಿ 34357 ರನ್ ಗಳಿಸಿ ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Advertisement

Advertisement
Tags :
Advertisement