ಡ್ರೆಸ್ಸಿಂಗ್ ರೂಮ್ನಲ್ಲಿ ಕಣ್ಣೀರಿಟ್ಟ ರೋಹಿತ್ ಶರ್ಮಾ; ಯಾಕೆ ಗೊತ್ತ ?
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಸೋಮವಾರ ನಡೆದ 55ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಸೂರ್ಯಕುಮಾರ್ ಯಾದವ್ ಅವರ ಅಮೋಘ ಶತಕದ ನೆರವಿನಿಂದ ಮುಂಬೈ 174 ರನ್ಗಳ ಸವಾಲಿನ ಟಾರ್ಗೆಟ್ ಅನ್ನು 17.2 ಓವರ್ಗಳಲ್ಲಿ ಬೆನ್ನಟ್ಟಿತು. ಮುಂಬೈ ಜಯ ಕಂಡರೂ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸಂತಸಗೊಂಡಿರಲಿಲ್ಲ. ಇವರು ಡ್ರೆಸ್ಸಿಂಗ್ ರೂಮ್ನಲ್ಲಿ ಅಳುತ್ತಿರುವುದು ಕಂಡುಬಂತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ಪ್ರಭಾವ ಬೀರಲು ವಿಫಲರಾದರು. ಇವರು ಐಪಿಎಲ್ 2024 ರಲ್ಲಿ ಅಗ್ರ ರನ್ ಗಳಿಸಿರುವವರ ಸಾಲಿನಲ್ಲಿ 17 ನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಸದ್ಯ ಕಳಪೆ ಫಾರ್ಮ್ನಿಂದ ಕಂಗಡೆಟ್ಟಿದ್ದಾರೆ. ಸೋಮವಾರ ಎಸ್ಆರ್ಹೆಚ್ ವಿರುದ್ಧ ನೀಡಿದ ಕಳಪೆ ಪ್ರದರ್ಶನದ ನಂತರ ರೋಹಿತ್ ಡ್ರೆಸ್ಸಿಂಗ್ ರೂಮ್ನಲ್ಲಿ ಅಳುತ್ತಿರುವಂತೆ ಕಂಡುಬಂತು. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.