For the best experience, open
https://m.newskannada.com
on your mobile browser.
Advertisement

ಕೊಂಡಾಣ ಭಂಡಾರಮನೆ ಧ್ವಂಸ ಪ್ರಕರಣ; ಮುತ್ತಣ್ಣ ಶೆಟ್ಟಿ ಜಾಮೀನಿನ ಹಿಂದೆ ಖಾದರ್ ಕೈವಾಡ

ಕೊಂಡಾಣ ಕ್ಷೇತ್ರದ ಭಂಡಾರಮನೆಯನ್ನು ಪುಡಿಗೈದ ರಾಕ್ಷಸರನ್ನು ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಉಳ್ಳಾಲದ ಶಾಸಕ ಖಾದರ್ ಹೊರತುಪಡಿಸಿ ಬೇರೆ ಯಾರೂ ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ಹಿಂದೂ, ಧಾರ್ಮಿಕ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಆರೋಪಿಸಿದ್ದಾರೆ.
06:12 PM Mar 04, 2024 IST | Maithri S
ಕೊಂಡಾಣ ಭಂಡಾರಮನೆ ಧ್ವಂಸ ಪ್ರಕರಣ  ಮುತ್ತಣ್ಣ ಶೆಟ್ಟಿ ಜಾಮೀನಿನ ಹಿಂದೆ ಖಾದರ್ ಕೈವಾಡ

ಉಳ್ಳಾಲ:ಕೊಂಡಾಣ ಕ್ಷೇತ್ರದ ಭಂಡಾರಮನೆಯನ್ನು ಪುಡಿಗೈದ ರಾಕ್ಷಸರನ್ನು ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಉಳ್ಳಾಲದ ಶಾಸಕ ಖಾದರ್ ಹೊರತುಪಡಿಸಿ ಬೇರೆ ಯಾರೂ ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ಹಿಂದೂ, ಧಾರ್ಮಿಕ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಆರೋಪಿಸಿದ್ದಾರೆ.

Advertisement

ಕೋಟೆಕಾರು ಪಟ್ಟಣದ ಶ್ರೀ ಕ್ಷೇತ್ರ ಕೊಂಡಾಣದ ಭಂಡಾರಮನೆಯ ಕಟ್ಟಡ ಧ್ವಂಸ ಪ್ರಕರಣದ ಆರೋಪಿಗಳು,ಸಹಕರಿಸಿದ ಪಟಲಾಂ ವಿರುದ್ಧ ಹಾಗೂ ಕ್ಷೇತ್ರದ ಭಂಡಾರಮನೆ ರಕ್ಷಣೆ, ಒಡವೆಗಳ ರಕ್ಷಣೆ ಕುರಿತಾಗಿ ಆಗ್ರಹಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ತಮಗೆ ಬೇಕಾದಷ್ಟು ಸ್ವಾಹಾ ಮಾಡಲು ಅಸ್ತ್ರವಾಗಿ ಬಳಸಿದ ಕ್ಷೇತ್ರದ ಆಡಳಿತ ತಮ್ಮ ಅಧೀನದಲ್ಲಿ ಇಲ್ಲ ಎಂಬ ಸ್ವಾರ್ಥಕ್ಕೆ ಭಂಡಾರಮನೆಯನ್ನೇ ಪುಡಿಗೈದಿರುವ ಮುತ್ತಣ್ಣ ಶೆಟ್ಟಿ ಮತ್ತು ಪಟಾಲಮ್ನ ಕಿಡಿಗೇಡಿ ಕೃತ್ಯ ಅತೀ ಖಂಡನೀಯ.ಇಂತಹ ರಾಕ್ಷಸರನ್ನು ರಾತ್ರೋ ರಾತ್ರಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲು ಕ್ಷೇತ್ರದ ಶಾಸಕ ವಿದಾನಸಭಾ ಸಭಾಪತಿ ಯು.ಟಿ.ಖಾದರ್ ಅವರ ಕೈವಾಡ ಇದೆ ಎಂದು ಆರೋಪಿಸಿದರು.

ಹಿಂದೂ ಮುಖಂಡ ನ್ಯಾಯವಾದಿ ಜಗದೀಶ ಶೇಣವ ಮಾತನಾಡಿ ಅನ್ಯಮತೀಯ ಬಾಬರ ಒಡೆದ ರಾಮ ಮಂದಿರ ಮತ್ತೆ ಪ್ರತಿಷ್ಠಾಪನೆ ಮಾಡಲು ಐನೂರು ವರ್ಷ ಬೇಕಾಯಿತು.ಆದರೆ ಹಿಂದೂ ಆಗಿ ಕೊಂಡಾಣ ಕ್ಷೇತ್ರದ ಅನ್ನ ತಿಂದು ಭಂಡಾರ ಮನೆಯನ್ನೇ ಕೆಡವಿದ ಮುತ್ತಣ್ಣ ಶೆಟ್ಟಿ ರಾಕ್ಷಸ ಎಂದರು. ಕೊಂಡಾಣ ಕ್ಷೇತ್ರ ಮುತ್ತಣ್ಣ ಶೆಟ್ಟರ ಕುಟುಂಬದ ಆಸ್ತಿ ಅಲ್ಲ. ಹಿಂದೂ ಸಮಾಜದ ಯಾರೂ ಕೂಡಾ ಮುತ್ತಣ್ಣ ಶೆಟ್ಟರನ್ನು ಯಾವುದೇ ಕಾರ್ಯಕ್ರಮಕ್ಕೆ ಆಮಂತ್ರಿಸಬಾರದು. ಧರ್ಮದ್ರೋಹಿಯಾಗಿರುವ ಅವರಿಂದಲೇ ಮೂವತ್ತು‌ ಲಕ್ಷ ರೂಪಾಯಿ ವೆಚ್ಚದ ಕಟ್ಟಡ ನಿರ್ಮಾಣ ವೆಚ್ಚವನ್ನು ಭರಿಸುವಂತೆ ಮುಜರಾಯಿ ಇಲಾಖೆ ಕ್ರಮ ಜರಗಿಸಬೇಕು.ಪೊಲೀಸರು ಇಂತಹ ರಾಕ್ಷಸರ ವಿರುದ್ಧ ಸರಳ ಸೆಕ್ಷನ್ ಹಾಕಲು ಶಾಸಕ ಖಾದರ್ ಅವರ ಒತ್ತಡವೇ ಕಾರಣ ಎಂದರು.

Advertisement

ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು,ಮಾಜಿ ಸದಸ್ಯೆ ದಿನಮಣಿ ರಾವ್,ವಿ.ಹಿಂ.ಪ ಮುಖಂಡ ಗೋಪಾಲ‌ ಕುತ್ತಾರು,ಬಜರಂಗದಳ ಪ್ರಮುಖರಾದ ಅರ್ಜುನ್ ಮಾಡೂರು ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಭಾನುವಾರದಂದು ಕೊಂಡಾಣದ ಭಂಡಾರ ಮನೆಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ನೀಡಿದ ದೂರಿನ ಆಧಾರದ ಮೇಲೆ ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಕ್ಷೇತ್ರದ ಗುರಿಕಾರ ಮುತ್ತಣ್ಣ ಶೆಟ್ಟಿ, ಧೀರಜ್ ಮತ್ತು ಶಿವರಾಜ್ ಎಂಬ
ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿ ಬೇಲ್ ನೀಡಿ ಬಿಡುಗಡೆಗೊಳಿಸಲಾಗಿದೆ.ಕೃತ್ಯಕ್ಕೆ ಬಳಸಲಾದ ಜೆಸಿಬಿಯನ್ನು ಉಳ್ಳಾಲ ಪೊಲೀಸರು ಇನ್ನೂ ವಶಪಡಿಸಿರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement
Tags :
Advertisement