ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಲ್ಮಾನ್‌ ಖಾನ್‌ರನ್ನು ಕಡೆಗಣಿಸಿ ಹೋದರೇ ರೊನಾಲ್ಡೊ: ಫ್ಯಾನ್ಸ್‌ ಕಿಡಿ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ.
01:51 PM Nov 01, 2023 IST | Ramya Bolantoor

ರಿಯಾಧ್:‌ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ, ಇತ್ತೀಚೆಗೆ ಫುಟ್‌ಬಾಲ್‌ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಬಾಕ್ಸಿಂಗ್‌ ಪಂದ್ಯವೊಂದರ ವೇಳೆ ಸಲ್ಮಾನ್‌ ಖಾನ್‌ ಅವರು ಪಕ್ಕದಲ್ಲಿ ನಿಂತಿದ್ದರೂ, ಅವರನ್ನು ನೋಡಿಯೂ ನೋಡದ ಹಾಗೆ ಹೋದ ವಿಡಿಯೋ ಈಗ ಭಾರಿ ವೈರಲ್‌ ಆಗಿದೆ. ಇದು ಸಲ್ಲು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ರಿಯಾಧ್‌ನಲ್ಲಿ ಇತ್ತೀಚೆಗೆ ಟೈಸನ್‌ ಫ್ಯೂರಿ ಹಾಗೂ ಫ್ರಾನ್ಸಿಸ್‌ ಗನ್ನೌ ಮಧ್ಯೆ ಬಾಕ್ಸಿಂಗ್‌ ಪಂದ್ಯ ನಡೆದಿದೆ. ಪಂದ್ಯ ವೀಕ್ಷಣೆಗೆ ಆಗಮಿಸಿದ ಗಣ್ಯರಲ್ಲಿ ನಟ ಸಲ್ಮಾನ್‌ ಖಾನ್‌ ಅವರು ಕೂಡ ಇದ್ದರು. ಇದೇ ವೇಳೆ ರೊನಾಲ್ಡೊ ಅವರು ಪತ್ನಿ ಜಾರ್ಜಿನಾ ಜತೆ ಆಗಮಿಸಿದರು. ಪಕ್ಕದಲ್ಲೇ ಸಲ್ಮಾನ್‌ ಖಾನ್‌ ಇದ್ದರೂ ರೊನಾಲ್ಡೊ ಅವರು ಪತ್ನಿ ಕೈ ಹಿಡಿದು ಹೋಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೋ ವೈರಲ್‌ ಆಗುತ್ತಲೇ ಒಂದಷ್ಟು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದ ವೇಳೆ ರೊನಾಲ್ಡೊ ಹಾಗೂ ಸಲ್ಮಾನ್‌ ಖಾನ್‌ ಅವರು ಭೇಟಿಯಾಗಿ ಮಾತಕತೆ ನಡೆಸಿದ್ದಾರೆ. ಸುಖಾಸುಮ್ಮನೆ ಸುಳ್ಳು ಹಬ್ಬಿಸಬೇಡಿ ಎಂದಿದ್ದಾರೆ. ಹಾಗೆಯೇ, ಸಲ್ಮಾನ್‌ ಖಾನ್‌ ಅವರನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕೂಡ ಪೋಸ್ಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ

Advertisement

Advertisement
Tags :
ACTORScinemaFANSfilmLatestNewsLatetsNewsNewsKannadaರೊನಾಲ್ಡೊಸಲ್ಮಾನ್​ ಖಾನ್​
Advertisement
Next Article