ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರೊನಾಲ್ಡೊಗೆ ಅಮಾನತು ಶಿಕ್ಷೆ ವಿಧಿಸಿದ ಸೌದಿ ಫುಟ್ಬಾಲ್​ ಫೆಡರೇಷನ್ !

ಅಶ್ಲೀಲ ವರ್ತನೆ ತೋರಿದ ಕಾರಣದಿಂದ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಅಲ್-ನಾಸರ್ ತಂಡವು ಅಲ್ ಶಬಾಬ್ ತಂಡದ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ನಂತರ ರೊನಾಲ್ಡೊ ಅಶ್ಲೀಲ ವರ್ತನೆ ತೋರಿದ್ದರು.
11:52 AM Mar 01, 2024 IST | Ashitha S

ದುಬೈ: ಅಶ್ಲೀಲ ವರ್ತನೆ ತೋರಿದ ಕಾರಣದಿಂದ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಅಲ್-ನಾಸರ್ ತಂಡವು ಅಲ್ ಶಬಾಬ್ ತಂಡದ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ನಂತರ ರೊನಾಲ್ಡೊ ಅಶ್ಲೀಲ ವರ್ತನೆ ತೋರಿದ್ದರು.

Advertisement

ಸೌದಿ ಫುಟ್​ಬಾಲ್ ಫೆಡರೇಷನ್​ನ ಶಿಸ್ತು ಮತ್ತು ನೀತಿ ಸಮಿತಿಯು ಕ್ರಿಸ್ಟಿಯಾನೊ ರೊನಾಲ್ಡೊಗೆ ಒಂದು ಪಂದ್ಯ ನಿಷೇಧ ವಿಧಿಸಿದೆ. ಪಂದ್ಯದ ಮುಕ್ತಾಯದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ಶಬಾಬ್ ತಂಡದ ಬೆಂಬಲಿಗರತ್ತ ಅಶ್ಲೀಲವಾಗಿ ಬೆರಳನ್ನು ತೋರಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ರೊನಾಲ್ಡೊ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು.

ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸೌದಿ ಫುಟ್​ಬಾಲ್ ಫೆಡರೇಷನ್​ಗೆ 10,000 ಸೌದಿ ರಿಯಲ್ಸ್ (2,666 ಡಾಲರ್) ಹಾಗೂ ದೂರು ದಾಖಲಿಸಿದ ಶುಲ್ಕವಾಗಿ ಅಲ್ ಶಬಾಬ್ ತಂಡಕ್ಕೆ 20,000 ಸೌದಿ ರಿಯಲ್ಸ್ ಪಾವತಿಸಬೇಕು ಎಂದು ಸಮಿತಿಯು ಸೂಚಿಸಿದೆ. ಈ ನಿರ್ಣಯವು ಅಂತಿಮವಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.

Advertisement

Advertisement
Tags :
Al-NassrAl-ShababCristianoRonaldoFootballFederationindiaLatestNewsNewsKannadaSaudi League
Advertisement
Next Article