For the best experience, open
https://m.newskannada.com
on your mobile browser.
Advertisement

ಕಾರಿನ ಗ್ಲಾಸ್‌ ಒಡೆದು 10 ಲಕ್ಷ ರೂ. ದೋಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇತ್ತೀಚೆಗೆ ಅಮಾಯಕರನ್ನು ಟಾರ್ಗೆಟ್‌ ಮಾಡಿ ಸೈಬರ್‌ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ 10 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಲಕ್ಕಿಹಳ್ಳಿ ಗ್ರಾಮದ ರೈತ ಮುದ್ದಪ್ಪ ಎಂಬವರು ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಬಂದು ಕಾರಲ್ಲಿಟ್ಟಿದ್ದರು.
07:44 AM Nov 23, 2023 IST | Gayathri SG
ಕಾರಿನ ಗ್ಲಾಸ್‌ ಒಡೆದು 10 ಲಕ್ಷ ರೂ  ದೋಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚಿತ್ರದುರ್ಗ: ಇತ್ತೀಚೆಗೆ ಅಮಾಯಕರನ್ನು ಟಾರ್ಗೆಟ್‌ ಮಾಡಿ ಸೈಬರ್‌ ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ 10 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಲಕ್ಕಿಹಳ್ಳಿ ಗ್ರಾಮದ ರೈತ ಮುದ್ದಪ್ಪ ಎಂಬವರು ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಬಂದು ಕಾರಲ್ಲಿಟ್ಟಿದ್ದರು.

Advertisement

ಬಳಿಕ ರಸ್ತೆ ಬದಿಯಲ್ಲಿನ ಅಂಗಡಿಯೊಂದಕ್ಕೆ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಬೈಕಲ್ಲಿ ಬಂದ ಇಬ್ಬರು ಚಾಲಕಿ ಕಳ್ಳರು ಹಣದ ಬ್ಯಾಗ್ ಕಳವು ಮಾಡಿಕೊಂಡು ಪಾರಾರಿಯಾಗಿದ್ದಾರೆ. ಕಳ್ಳರು ರೈತನ ಚಲನವಲನ ಗಮನಿಸಿಕೊಂಡು ಬಂದಿದ್ದು, ಈ ಕೃತ್ಯ ಎಸಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾಡಹಗಲೇ ಕಳ್ಳತನ ಆಗಿರುವುದರಿಂದ ನಗರದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

Advertisement
Advertisement
Tags :
Advertisement