ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

100 ಕೋಟಿ ರೂ. ಪೋಂಜಿ ಸ್ಕ್ಯಾಮ್: ನಟ ಪ್ರಕಾಶ್ ರಾಜ್‌ಗೆ ಇ.ಡಿ ಸಮನ್ಸ್

ಜ್ಯುವೆಲರಿಯೊಂದರ ಪೊಂಜಿ ಸ್ಕೀಮ್‌ ಹಗರಣಕ್ಕೆ ಸಂಬಂಧಿಸಿ ನಟ ಪ್ರಕಾಶ್‌ ರಾಜ್‌ ಗೆ ಇಡಿ ಸಮನ್ಸ್‌ ನೀಡಿದೆ. ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪ್ರಣವ್ ಜ್ಯುವೆಲರ್ಸ್‌ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ.
07:41 PM Nov 23, 2023 IST | Ashika S

ನವದೆಹಲಿ: ಜ್ಯುವೆಲರಿಯೊಂದರ ಪೊಂಜಿ ಸ್ಕೀಮ್‌ ಹಗರಣಕ್ಕೆ ಸಂಬಂಧಿಸಿ ನಟ ಪ್ರಕಾಶ್‌ ರಾಜ್‌ ಗೆ ಇಡಿ ಸಮನ್ಸ್‌ ನೀಡಿದೆ. ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪ್ರಣವ್ ಜ್ಯುವೆಲರ್ಸ್‌ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಚೆನ್ನೈ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುವ ತಿರುಚ್ಚಿ ಮೂಲದ ಆಭರಣ ಸರಪಳಿಯ ಶಾಖೆ ಪ್ರಣವ್‌ ಜ್ಯುವೆಲ್ಸ್‌ ಗಳ ಮೇಲೆ ಇಡಿ ದಾಳಿ ನಡೆಸಿದೆ, ಪ್ರಣವ್‌ ಪೋಂಜಿ ಯೋಜನೆ ನಡೆಸುತ್ತಿದ್ದು ಹೂಡಿಕೆದಾರರಿಗೆ ₹ 100 ಕೋಟಿ ವಂಚಿಸಿದೆ ಎಂದು ಆರೋಪಿಸಲಾಗಿದೆ.

ಪ್ರಣವ್ ಜ್ಯುವೆಲರ್ಸ್ ನಡೆಸುತ್ತಿದ್ದ ಮಳಿಗೆಗಳು ಅಕ್ಟೋಬರ್‌ನಲ್ಲಿ ಮುಚ್ಚಲ್ಪಟ್ಟಿವೆ. ಈ ನಿಟ್ಟಿನಲ್ಲಿ ಸ್ವೀಕರಿಸಲಾದ ದೂರುಗಳ ಆಧಾರದ ಮೇಲೆ ತಮಿಳುನಾಡಿನ ತಿರುಚ್ಚಿಯ ಆರ್ಥಿಕ ಅಪರಾಧಗಳ ವಿಭಾಗವು ಮಾಲೀಕ ಮದನ್ ವಿರುದ್ಧ ಪ್ರಕರಣ ದಾಖಲಿಸಿದೆ. ಈ ತಿಂಗಳ ಆರಂಭದಲ್ಲಿ ಆಭರಣ ಮಳಿಗೆ ಮಾಲೀಕರು ಮತ್ತು ಅವರ ಪತ್ನಿ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

Advertisement

ಚಿನ್ನದ ಹೂಡಿಕೆ ಯೋಜನೆಯ ನೆಪದಲ್ಲಿ ಪ್ರಣವ್ ಜ್ಯುವೆಲ್ಲರ್ಸ್‌ ₹ 100 ಕೋಟಿ ಸಂಗ್ರಹಿಸಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

Advertisement
Tags :
LatetsNewsNewsKannadaಇಡಿ ಸಮನ್ಸ್‌ಜ್ಯುವೆಲರಿನಟ ಪ್ರಕಾಶ್​ ರಾಜ್​ಪೊಂಜಿ ಸ್ಕೀಮ್‌ಪ್ರಣವ್ ಜ್ಯುವೆಲರ್ಸ್‌ಬ್ರಾಂಡ್ ಅಂಬಾಸಿಡರ್ಹಗರಣ
Advertisement
Next Article