For the best experience, open
https://m.newskannada.com
on your mobile browser.
Advertisement

ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್: ವ್ಯಕ್ತಿ ಕಂಗಾಲು

ಬೆಂಗಳೂರಿನ ಜೆಬಿ ಕಾವಲ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಬಂದ ಘಟನೆ ನಡೆದಿದೆ.
08:10 PM May 15, 2024 IST | Ashika S
ಬರೋಬ್ಬರಿ 17 ಕೋಟಿ ರೂ  ಕರೆಂಟ್ ಬಿಲ್  ವ್ಯಕ್ತಿ ಕಂಗಾಲು

ಬೆಂಗಳೂರು: ಬೆಂಗಳೂರಿನ  ಜೆಬಿ ಕಾವಲ್‌ನ ಕೃಷ್ಣಾನಂದ ನಗರದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಬಂದ ಘಟನೆ ನಡೆದಿದೆ.

Advertisement

ಕೃಷ್ಣಾನಂದ ನಗರದ ಪೊಲೀಸ್ ಕ್ವಾಟ್ರಸ್ ಮನೆಯೊಂದಕ್ಕೆ ಬರೋಬ್ಬರಿ 7 ಕೋಟಿ ರೂ. ಕರೆಂಟ್ ಬಿಲ್ ಬಂದಿದ್ದು, ಬಿಲ್ ಕಂಡು ನಿವಾಸಿಗಳು ದಂಗಾಗಿದ್ದಾರೆ.

ಮೇ 5 ರಂದು ಕರೆಂಟ್ ಬಿಲ್ ವಿತರಣೆ ಆಗಿದೆ. ಒಟ್ಟು 17,15,75596 ಕರೆಂಟ್ ಬಿಲ್ ಬಂದಿದೆ. 17 ಕೋಟಿ ಬಿಲ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Advertisement

ಇದು ಬೆಸ್ಕಾಂ (BESCOM) ಮೀಟರ್ ತಾಂತ್ರಿಕ ಸಮಸ್ಯೆಯಿಂದ ಆಗಿರುವ ತಪ್ಪಾ ಅಥವಾ ಸರಿನಾ ಎಂದು ಬೆಸ್ಕಾಂ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ.

ಇಷ್ಟೊಂದು ವಿದ್ಯುತ್ ಬಿಲ್ ಬರೋಕೆ ಹೇಗೆ ಸಾಧ್ಯ? ಅಷ್ಟು ಬಳಸಿಲ್ಲ ಎಂದು ನಿವಾಸಿಗಳು ವಾದಿಸಿದ್ದಾರೆ. ಸದ್ಯ ಈ ವಿದ್ಯುತ್ ಬಿಲ್ ಭಾರೀ ವೈರಲ್ ಆಗುತ್ತಿದೆ.

Advertisement
Tags :
Advertisement