ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆತ್ತಲೆ ದೇಹ ನೋಡುವ ಖಯಾಲಿಗೆ 2.149 ಲಕ್ಷ ರೂ. ಕಳೆದುಕೊಂಡ ಟೆಕ್ಕಿ

ಇತ್ತೀಚೆಗೆ ಡೇಟಿಂಗ್‌ ಆಪ್‌ ಗಳನ್ನು ಬಳಸುವ ಯುವಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೇ ರೀತಿ ಡೇಟಿಂಗ್‌ ಆಪ್‌ ನಲ್ಲಿ ಪರಿಚಯವಾದ ಯುವತಿ ಟೆಕ್ಕಿಗೆ ಬೆತ್ತಲೆ ವಿಡಿಯೊ ಕಾಲ್‌ ಮಾಡಿದ ಯುವತಿಯೊಬ್ಬಳು ಬ್ಲ್ಯಾಕ್‌ಮೇಲ್‌ ಮಾಡಿ 2.19 ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
01:12 PM Dec 24, 2023 IST | Ashika S

ಬೆಂಗಳೂರು: ಇತ್ತೀಚೆಗೆ ಡೇಟಿಂಗ್‌ ಆಪ್‌ ಗಳನ್ನು ಬಳಸುವ ಯುವಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೇ ರೀತಿ ಡೇಟಿಂಗ್‌ ಆಪ್‌ ನಲ್ಲಿ ಪರಿಚಯವಾದ ಯುವತಿ ಟೆಕ್ಕಿಗೆ ಬೆತ್ತಲೆ ವಿಡಿಯೊ ಕಾಲ್‌ ಮಾಡಿದ ಯುವತಿಯೊಬ್ಬಳು ಬ್ಲ್ಯಾಕ್‌ಮೇಲ್‌ ಮಾಡಿ 2.19 ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

ಬೆಳ್ಳಂದೂರಿನ ನಿವಾಸಿ ನಿಶಾಂತ್ (31) ಹಣ ಕಳೆದುಕೊಂಡವರು. ಈತ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಡೇಟಿಂಗ್ ಆ್ಯಪ್‌ನಲ್ಲಿ ಈತನಿಗೆ ಡಿಸೆಂಬರ್ 21ರಂದು ಯುವತಿ ಪರಿಚಯವಾಗಿದ್ದಾಳೆ. ನಂತರ ವಾಟ್ಸ್‌ ಆ್ಯಪ್ ನಂಬರ್ ಪಡೆದುಕೊಂಡು ಯುವತಿ ವಿಡಿಯೊ ಕಾಲ್‌ ಮಾಡಿದ್ದಾಳೆ.

ವಿಡಿಯೊ ಕಾಲ್‌ನಲ್ಲಿ ಆಕೆ ಬೆತ್ತಲಾಗಿದ್ದಲ್ಲದೇ ನಿಶಾಂತ್‌ಗೆ ಬೆತ್ತಲಾಗುವಂತೆ ಪ್ರಚೋದಿಸಿದ್ದಾಳೆ. ಆಕೆಯ ಮಾತಿನ ಮೋಡಿಗೆ ಬೆರಗಾದ ನಿಶಾಂತ್ ಕೂಡ ವಿವಸ್ತ್ರನಾಗಿ ಮಾತನಾಡಿದ್ದಾನೆ. ಈ ವೇಳೆ ಆತನ ಗಮನಕ್ಕೆ ಬಾರದೆ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ ಯುವತಿ, ಕೆಲ ಸಮಯದ ನಂತರ ಸ್ಟ್ರೀನ್ ಶಾಟ್ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.

Advertisement

ನಂತರ ಅಪರಿಚಿತ ಯುವತಿ ನೀಡಿದ ಬ್ಯಾಂಕ್ ಖಾತೆಗೆ 2.19 ಲಕ್ಷ ರೂ.ಗಳನ್ನು ಟೆಕ್ಕಿ ಜಮಾ ಮಾಡಿದ್ದು, ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಆತ ಕಳುಹಿಸಿರಲಿಲ್ಲ. ಆತನ ಸ್ನೇಹಿತರ ಮೊಬೈಲ್‌ಗೆ ವಿಡಿಯೊ ಕಳುಹಿಸಿದ ಯುವತಿ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿದ್ದಾಳೆ. ಈ ಕುರಿತು ಸೈಬರ್‌ ಠಾಣೆಗೆ ದೂರು ನೀಡಲಾಗಿದೆ.

Advertisement
Tags :
LatetsNewsNewsKannadaಟೆಕ್ಕಿಡೇಟಿಂಗ್ ಆಪ್ಬೆತ್ತಲೆ ವಿಡಿಯೊಯುವಜನಯುವತಿ
Advertisement
Next Article