ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತೀಯ ಸೇನೆ ಬತ್ತಳಿಕೆಗೆ ಬಂತು ರುದ್ರಾ: ಇದರ ವಿಶೇಷತೆ ಏನು ಗೊತ್ತಾ

ನವದೆಹಲಿ: ಭಾರತೀಯ ಸೇನೆ ಪ್ರಸ್ತುತ ದೇಶಿಯ ತಂತ್ರಜ್ಞಾನ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದೆ. ಹಲವು ರಕ್ಷಣಾ ಉಪಕರಣಗಳು ನಮ್ಮ ದೇಶದಲ್ಲಿಯೇ ಉತ್ಪಾದನೆಯಾಗುತ್ತಿವೆ. ಇದೀಗ ಭಾರತೀಯ ಸೇನೆಯ ವೈಮಾನಿಕ ಘಟಕ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ರುದ್ರಾ ಹೆಲಿಕಾಪ್ಟರ್‌ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಎಚ್‌ಎಎಲ್‌ ಈ ರುದ್ರಾ ಹೆಲಿಕಾಪ್ಟರ್‌ ಗಳ ವಿನ್ಯಾಸ ಮಾಡಿದೆ. ರುದ್ರಾ ಹೆಲಿಕಾಪ್ಟರ್‌ ಮೂಲಕ ಹೊಸ ಪೀಳಿಗೆಯ ರಾಕೆಟ್‌ ಹಾಗೂ ಟರ್ರೆಟ್‌ ಮತ್ತು ಗುಂಡುಗಳ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ನಿಖರ ಗುರಿಯ ಮೇಲೆ ಉಕ್ಕು ಮತ್ತು ಬೆಂಕಿಯ ಮಳೆಯನ್ನು ರುದ್ರಾ ಸುರಿಸಿದೆ.
10:47 PM Nov 05, 2023 IST | Umesha HS

ನವದೆಹಲಿ: ಭಾರತೀಯ ಸೇನೆ ಪ್ರಸ್ತುತ ದೇಶಿಯ ತಂತ್ರಜ್ಞಾನ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದೆ. ಹಲವು ರಕ್ಷಣಾ ಉಪಕರಣಗಳು ನಮ್ಮ ದೇಶದಲ್ಲಿಯೇ ಉತ್ಪಾದನೆಯಾಗುತ್ತಿವೆ.
ಇದೀಗ ಭಾರತೀಯ ಸೇನೆಯ ವೈಮಾನಿಕ ಘಟಕ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ರುದ್ರಾ ಹೆಲಿಕಾಪ್ಟರ್‌ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಎಚ್‌ಎಎಲ್‌ ಈ ರುದ್ರಾ ಹೆಲಿಕಾಪ್ಟರ್‌ ಗಳ ವಿನ್ಯಾಸ ಮಾಡಿದೆ. ರುದ್ರಾ ಹೆಲಿಕಾಪ್ಟರ್‌ ಮೂಲಕ ಹೊಸ ಪೀಳಿಗೆಯ ರಾಕೆಟ್‌ ಹಾಗೂ ಟರ್ರೆಟ್‌ ಮತ್ತು ಗುಂಡುಗಳ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ನಿಖರ ಗುರಿಯ ಮೇಲೆ ಉಕ್ಕು ಮತ್ತು ಬೆಂಕಿಯ ಮಳೆಯನ್ನು ರುದ್ರಾ ಸುರಿಸಿದೆ.

Advertisement

ಈಶಾನ್ಯ ಭಾರತದ ಬೆಟ್ಟವೊಂದರಲ್ಲಿ ರುದ್ರಾ ಹೆಲಿಕಾಪ್ಟರ್‌ ಪರೀಕ್ಷೆ ನಡೆಸಿದ ವಿಡಿಯೋವೊಂದನ್ನು ಭಾರತೀಯ ಸೇನೆ ಎಕ್ಸ್ನಲ್ಲಿ ಹಂಚಿಕೊಂಡಿದೆ. ರಾಕೆಟ್‌ ಹಾಗೂ ಮದ್ದುಗುಂಡುಗಳನ್ನು ಹೊತ್ತ ಮೂರು ರುದ್ರಾ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿ ನಿಖರ ಗುರಿ ಮೇಲೆ ದಾಳಿ ನಡೆಸಿವೆ. 70 ಎಂಎಂ ರಾಕೆಟ್‌ ಹಾಗೂ ಆಕಾಶದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ರುದ್ರಾ ಹೆಲಿಕಾಪ್ಟರ್‌ಗಳು ಹೊಂದಿವೆ.

Advertisement
Advertisement
Tags :
airforceARMYhelicopterindiaNAVYಎಚ್‌ಎಎಲ್‌ದೇಶಭಾರತಸೇನಾಪಡೆಸೇನೆಹೆಲಿಕಾಪ್ಟರ್
Advertisement
Next Article