For the best experience, open
https://m.newskannada.com
on your mobile browser.
Advertisement

ಕ್ಷಿಪಣಿ ಬಳಸಿ ಉಕ್ರೇನ್‌ನ ವಿದ್ಯುತ್‌ ಸ್ಥಾವರ ಉಡಾಯಿಸಿದ ರಷ್ಯಾ

ಆರು ತಿಂಗಳಿನಿಂದ ಸಸತವಾಗಿ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ತನ್ನ ಗಮನವನ್ನು ಮೂಲಸೌಕರ್ಯಗಳ ಮೇಲೆ ತಿರುಗಿಸಿದ್ದು, ಕಿಪಣಿ ಹಾಗು ಡ್ರೋನ್‌ ಬಳಸಿ ಉಕ್ರೇನ್‌ನ ದೊಡ್ಡ ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಿ ಅದನ್ನು ನಾಶಪಡಿಸಿದೆ.
08:53 PM Apr 12, 2024 IST | Maithri S
ಕ್ಷಿಪಣಿ ಬಳಸಿ ಉಕ್ರೇನ್‌ನ ವಿದ್ಯುತ್‌ ಸ್ಥಾವರ ಉಡಾಯಿಸಿದ ರಷ್ಯಾ

ಕೀವ್:‌ ಆರು ತಿಂಗಳಿನಿಂದ ಸಸತವಾಗಿ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ತನ್ನ ಗಮನವನ್ನು ಮೂಲಸೌಕರ್ಯಗಳ ಮೇಲೆ ತಿರುಗಿಸಿದ್ದು, ಕಿಪಣಿ ಹಾಗು ಡ್ರೋನ್‌ ಬಳಸಿ ಉಕ್ರೇನ್‌ನ ದೊಡ್ಡ ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಿ ಅದನ್ನು ನಾಶಪಡಿಸಿದೆ.

Advertisement

ಉಕ್ರೇನ್‌ನ ಕೀವ್‌, ಚೆರ್ಕಾಸಿ, ಝೈಟೊಮಿರ್ ಪ್ರದೇಶಗಳು ಸೇರಿದಂತೆ ೩೦ಲಕ್ಷ ಜನರಿಗೆ ವಿದ್ಯುತ್‌ ಒದಗಿಸುತ್ತಿದ್ದ ಟ್ರಿಪಿಲ್ಸ್ಕಾ ಸ್ಥಾವರದ ಮೇಲೆ ದಾಳಿಯಾಗಿದ್ದು, ಪರಿಣಾಮವಾಗಿ ಟ್ರಾನ್ಸ್ಫಾರ್ಮರ್, ಟರ್ಬೈನ್‌, ಜನರೇಟರ್‌ಗಳು ಹೊತ್ತಿ ಉರಿದಿವೆ.

ಸುರಕ್ಷಿತ ಅಡಗುತಾಣಗಳನ್ನು ಸೇರುವ ಮೂಲಕ ಕಾರ್ಮಿಕರು ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ ಎಂದು ಸ್ಥಾವರವನ್ನು ನಿರ್ವಹಿಸುವ ಕಂಪನಿಯ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷ ಆಂಡ್ರಿ ಗೋಟಾ ಹೇಳಿದ್ದಾರೆ.

Advertisement

ಈ ದಾಳಿಯಿಂದಾಗಿ ಇಡೀ ಸ್ಥಾವರವು ಬೆಂಕಿಗೆ ಆಹುತಿಯಾಗಿ ಸುಟ್ಟು ಹೋಗಿದ್ದು, ಸುತ್ತಲು ದಟ್ಟ ಹೊಗೆ ಕವಿದಿತ್ತು. ಇದಾದ ಕೆಲ ಗಂಟೆಗಳ ನಂತರ ರಕ್ಷಣಾ ಸಿಬ್ಬಂದಿಗಳು ಅಶೇಷಗಳ ತೆರವು ಕಾರ್ಯಕ್ಕೆ ಕೈ ಹಾಕಿದರು ಎಂದು ಗೋಟ ಹೇಳಿದ್ದಾರೆ.

ರಷ್ಯಾದ ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿ ಉಕ್ರೇನ್‌ ನಡೆಸಿದ ದಾಳಿಗೆ ಈ ಮೂಲಕ ಪ್ರತಿಕಾರ ತೀರಿಸಿಕೊಳ್ಳಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿದ್ದಾರೆ.

Advertisement
Tags :
Advertisement