For the best experience, open
https://m.newskannada.com
on your mobile browser.
Advertisement

ಭಜನೆ, ಹಾಡು, ಜೈಕಾರದ ಮೂಲಕ ಮೋದಿಯನ್ನು ಸ್ವಾಗತಿಸಿದ ರಷ್ಯಾ

ಇಂದು ಸೋಮವಾರ (ಜುಲೈ 8) ಸಂಜೆ ರಷ್ಯಾ ರಾಜಧಾನಿ ಮಾಸ್ಕೋ ವನ್ನು ಪ್ರಧಾನಿ ನರೇಂದ್ರ ಮೋದಿ ತಲುಪಿದ್ದಾರೆ. ನರೇಂದ್ರ ಮೋದಿ ಅವರು ರಷ್ಯಾ ತಲುಪುತ್ತಲೇ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ.
07:00 PM Jul 08, 2024 IST | Chaitra Kulal
ಭಜನೆ  ಹಾಡು  ಜೈಕಾರದ ಮೂಲಕ ಮೋದಿಯನ್ನು ಸ್ವಾಗತಿಸಿದ ರಷ್ಯಾ

ಮಾಸ್ಕೋ: ಇಂದು ಸೋಮವಾರ (ಜುಲೈ 8) ಸಂಜೆ ರಷ್ಯಾ ರಾಜಧಾನಿ ಮಾಸ್ಕೋ ವನ್ನು ಪ್ರಧಾನಿ ನರೇಂದ್ರ ಮೋದಿ ತಲುಪಿದ್ದಾರೆ. ನರೇಂದ್ರ ಮೋದಿ ಅವರು ರಷ್ಯಾ ತಲುಪುತ್ತಲೇ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ಅನಿವಾಸಿ ಭಾರತೀಯರು, ರಷ್ಯಾ ನಾಗರಿಕರು ಭಜನೆ, ಹಾಡು, ಜೈಕಾರದ ಮೂಲಕ ಭಾರತದ ಪ್ರಧಾನಿಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ.

Advertisement

ಉಕ್ರೇನ್‌ ಹಾಗೂ ರಷ್ಯಾ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ರಷ್ಯಾ ಪ್ರವಾಸ ಕೊಂಡಿದ್ದು, ಇಂದು ಮತ್ತು ನಾಳೆ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಬಳಿಕ ಬುಧವಾರ ಆಸ್ಟ್ರಿಯಾಗೆ ತೆರಳಿ ಗುರುವಾರದವರೆಗೂ ಅಲ್ಲೆ ಇರಲಿದ್ದಾರೆ. ರಷ್ಯಾ ನಾಗರಿಕರಂತೂ ಮಾಸ್ಕೋದಲ್ಲಿರುವ, ಮೋದಿ ತಂಗಲಿರುವ ಹೋಟೆಲ್‌ ಎದುರು, ಭಾರತೀಯ ಶೈಲಿಯ ದಿರಸುಗಳನ್ನು ಧರಿಸಿ ಭಜನೆ, ಹಾಡು, ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ಭಾರತ ಮತ್ತು ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದ್ದು, ರಷ್ಯಾ-ಉಕ್ರೇನ್‌ ಯುದ್ಧದ ಬಳಿಕ ಮೊದಲ ಭೇಟಿಯಲ್ಲಿ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಲಿದ್ದಾರೆ.

ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರು ಸೋಮವಾರ ನರೇಂದ್ರ ಮೋದಿ ಅವರಿಗೆ ಔತಣ ಕೂಡ ಏರ್ಪಡಿಸಿದ್ದಾರೆ. ಮಂಗಳವಾರ ಶೃಂಗಸಭೆ ನಡೆಯಲಿದ್ದು, ಉಭಯ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಜುಲೈ 8 ಹಾಗೂ 9ರಂದು ನರೇಂದ್ರ ಮೋದಿ ಅವರು ಮಾಸ್ಕೋದಲ್ಲಿ ಇರಲಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

https://x.com/ANI/status/1810283957067420072?

Advertisement
Tags :
Advertisement