For the best experience, open
https://m.newskannada.com
on your mobile browser.
Advertisement

ಅಭಿಮಾನಿಯನ್ನು ಚೇಸ್​ ಮಾಡಿ‌ ಸರ್ಪ್ರೈಸ್​ ಕೊಟ್ಟ ಕ್ರಿಕೆಟ್ ದೇವರು: ವಿಡಿಯೋ ವೈರಲ್

ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್​ ಅಭಿಮಾನಿಯೊಬ್ಬರಿಗೆ ಬಿಗ್​ ಸರ್ಪ್ರೈಸ್ ನೀಡಿದ್ದಾರೆ. ಮುಂಬೈನ ರಸ್ತೆ ಒಂದರಲ್ಲಿ ತೆಂಡುಲ್ಕರ್ ಅಭಿಮಾನಿಯೊಬ್ಬ ಬೈಕ್ ಮೇಲೆ ಹೋಗುತ್ತಿದ್ದರು.
09:45 AM Feb 02, 2024 IST | Ashitha S
ಅಭಿಮಾನಿಯನ್ನು ಚೇಸ್​ ಮಾಡಿ‌ ಸರ್ಪ್ರೈಸ್​ ಕೊಟ್ಟ ಕ್ರಿಕೆಟ್ ದೇವರು  ವಿಡಿಯೋ ವೈರಲ್

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್​ ಅಭಿಮಾನಿಯೊಬ್ಬರಿಗೆ ಬಿಗ್​ ಸರ್ಪ್ರೈಸ್ ನೀಡಿದ್ದಾರೆ. ಮುಂಬೈನ ರಸ್ತೆ ಒಂದರಲ್ಲಿ ತೆಂಡುಲ್ಕರ್ ಅಭಿಮಾನಿಯೊಬ್ಬ ಬೈಕ್ ಮೇಲೆ ಹೋಗುತ್ತಿದ್ದರು.

Advertisement

ಈ ಅಭಿಮಾನಿ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಜರ್ಸಿ ತೊಟ್ಟಿದ್ದರು. ಅದರ ಹಿಂದೆ 10, I miss you ಎಂದು ಬರೆಯಲಾಗಿತ್ತು. ಹಿಂಬದಿಯಿಂದ ಜರ್ಸಿ ನೋಡ್ತಿದ್ದಂತೆಯೇ ಆತ ತೆಂಡುಲ್ಕರ್ ಅಭಿಮಾನಿ ಅನ್ನೋದು ಗೊತ್ತಾಯಿತು. ಅದೇ ಮಾರ್ಗವಾಗಿ ತೆಂಡುಲ್ಕರ್ ಕೂಡ ಹೋಗುತ್ತಿದ್ದರು. ಅಭಿಮಾನಿ ಧರಿಸಿದ್ದ ಜರ್ಸಿ ತೆಂಡುಲ್ಕರ್ ಕಣ್ಣಿಗೆ ಬಿದ್ದಿದೆ. ಆಗ ಸಚಿನ್ ಕೂಡಲೇ ಕಾರಿನ ಮೂಲಕ ಬೈಕ್ ಚೇಸ್ ಮಾಡುತ್ತಾರೆ. ಆತ ಬೈಕ್ ನಿಲ್ಲಿಸುತ್ತಿದ್ದಂತೆಯೇ, ಕಾರಿನ ವಿಂಡೋ ಓಪನ್ ಮಾಡಿದ ಕ್ರಿಕೆಟ್​ ದೇವರು, ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಬಗ್ಗೆ ಕೇಳಬೇಕಿತ್ತು ಎಂದು ಕೇಳುತ್ತಾರೆ.

ಆಗ ಸಚಿನ್​​ರನ್ನು ನೋಡ್ತಿದ್ದಂತೆ ಅಭಿಮಾನಿ ಬಿಗ್​ಸರ್ಪ್ರೈಸ್​ ಆಗ್ತಾರೆ. ಸರ್.. ಸರ್.. ಎಂದು ಕೈಮುಗಿಯುತ್ತಾರೆ. ಕೊನೆಗೆ ಅಭಿಮಾನಿ ಜೊತೆ ತೆಂಡುಲ್ಕರ್ ಮಾತುಕತೆ ನಡೆಸ್ತಾರೆ. ಪ್ರೀತಿಯ ಅಭಿಮಾನಿಗೆ ಆಟೋಗ್ರಾಫ್ ನೀಡಿದ್ದಾರೆ. ಈ ಅಭಿಮಾನಿಯನ್ನು ಭೇಟಿಯಾದ ಅನುಭವವನ್ನ ತೆಂಡುಲ್ಕರ್ ಟ್ಚಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

Advertisement

Advertisement
Tags :
Advertisement