ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಾಗಚೈತನ್ಯಗೆ ಪ್ರೇಮಿಗಳ ದಿನಕ್ಕೆ ಶುಭ ಹಾರೈಸಿದ ಸಾಯಿ ಪಲ್ಲವಿ: ವಿಡಿಯೋ ವೈರಲ್‌

ಟಾಲಿವುಡ್ ತಾರೆಯರಾದ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಪ್ರೇಮಿಗಳ ದಿನದಂದು ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕಿಂಗ್ ಸರ್ಫ್ರೈಸ್ ನೀಡಿದ್ದು, ಇವರಿಬ್ಬರು ಜೊತೆಯಾಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಸಾಯಿ ಪಲ್ಲವಿ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಈ ವೀಡಿಯೋವನ್ನು 80 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿ ವೈರಲ್ ಮಾಡಿದ್ದಾರೆ.
06:10 PM Feb 14, 2024 IST | Ashitha S

ಟಾಲಿವುಡ್ ತಾರೆಯರಾದ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಪ್ರೇಮಿಗಳ ದಿನದಂದು ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕಿಂಗ್ ಸರ್ಫ್ರೈಸ್ ನೀಡಿದ್ದು, ಇವರಿಬ್ಬರು ಜೊತೆಯಾಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಸಾಯಿ ಪಲ್ಲವಿ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಈ ವೀಡಿಯೋವನ್ನು 80 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿ ವೈರಲ್ ಮಾಡಿದ್ದಾರೆ.

Advertisement

ಅಂದಹಾಗೆ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಜೊತೆಯಾಗಿ ನಟಿಸುತ್ತಿರುವ ತಮ್ಮ ಹೊಸ ಸಿನಿಮ ಥಾಂಡೆಲ್‌ಗಾಗಿ ಹೀಗೆ ಒಂದೇ ವೀಡಿಯೋದಲ್ಲಿ ಪ್ರೇಮಿಗಳಂತೆ ಪೋಸ್ ನೀಡಿದ್ದಾರೆ. ಇದರಲ್ಲಿ ನಾಗಚೈತನ್ಯ ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ಬುಜ್ಜಿ ತಲ್ಲಿ ಬಂದ್ಬಿಡುತ್ತೇನಲ್ವೆ? ನಾ ಓಯೇ ಅಂತ ಕರೆಯುತ್ತಿದ್ದು, ನಾಗಚೈತನ್ಯ ಅವರ ಈ ಪ್ರೇಮ ತುಂಬಿದ ಮನವಿಗೆ ಸಾಯಿ ಪಲ್ಲವಿ ಮೊದಲಿಗೆ ಹುಸಿ ಮುನಿಸು ತೋರಿ ಕೊನೆಯಲ್ಲಿ ನಗುತ್ತಾ ಅಲ್ಲಿಂದ ಓಡುತ್ತಾರೆ.

ತಮ್ಮ ಮುಂಬರುವ ಥಾಂಡೆಲ್ ಸಿನಿಮಾದ ಪ್ರಚಾರಕ್ಕಾಗಿ, ಈ ವೀಡಿಯೋ ಪೋಸ್ಟ್ ಮಾಡಿ ಪ್ರೇಮಿಗಳ ದಿನದ ಶುಭ ಹಾರೈಸಿದ್ದಾರೆ ಸಾಯಿ ಪಲ್ಲವಿ. ಇದೇ ವೀಡಿಯೋವನ್ನು ಸ್ವತಃ ನಾಗ ಚೈತನ್ಯ ಕೂಡ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ನಟನೆಯ ಈ ಸಿನಿಮಾವನ್ನು ಕಾರ್ತಿಕೇಯ ಸಿನಿಮಾ ಖ್ಯಾತಿಯ ಚಂದೂ ಮೊಂಡೆಟಿ ನಿರ್ದೇಶಿಸುತ್ತಿದ್ದಾರೆ. ಸಾಯಿ ಪಲ್ಲವಿಗೆ ಈ ಸಿನಿಮಾದಲ್ಲಿ ಮಹಿಳಾ ಪ್ರಧಾನ್ಯತೆಯ ಪಾತ್ರವಿದ್ದು, ಇದರ ಶೇಕಡಾ 40 ರಷ್ಟು ಶೂಟಿಂಗ್ ಮುಗಿದಿದೆ. ಶ್ರೀಕಾಕುಲಂನ ಹುಡುಗಿಯಾಗಿ ಹಳ್ಳಿಯ ಸುಂದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Advertisement
Tags :
LatestNewsNagachaitanyaNewsKannadaSaiPallaviThandelvalentine'sಪ್ರೇಮಿಗಳ ದಿನ
Advertisement
Next Article