For the best experience, open
https://m.newskannada.com
on your mobile browser.
Advertisement

'ಸಲಾರ್', ‘ಕೆಜಿಎಫ್ 2’ಗೂ ಯಾವುದೇ ಕನೆಕ್ಷನ್ ಇಲ್ಲ

ಪ್ರಶಾಂತ್ ನೀಲ್  ನಿರ್ದೇಶನದ ‘ಸಲಾರ್’ ಸಿನಿಮಾ ತೆರೆಗಪ್ಪಳಿಸಲು ತಯಾರಾಗಿದ್ದು, ಡಿಸೆಂಬರ್ 22ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. 
08:23 AM Dec 19, 2023 IST | Ashika S
 ಸಲಾರ್   ‘ಕೆಜಿಎಫ್ 2’ಗೂ ಯಾವುದೇ ಕನೆಕ್ಷನ್ ಇಲ್ಲ

ಬೆಂಗಳೂರು: ಪ್ರಶಾಂತ್ ನೀಲ್  ನಿರ್ದೇಶನದ ‘ಸಲಾರ್’ ಸಿನಿಮಾ ತೆರೆಗಪ್ಪಳಿಸಲು ತಯಾರಾಗಿದ್ದು, ಡಿಸೆಂಬರ್ 22ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ.

Advertisement

ಇಲ್ಲಿ ಮುಖ್ಯವಾದ ವಿಚಾರ ಏನು ಅಂದ್ರೆ  ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಅನೇಕರು ಕನೆಕ್ಷನ್ ಇದೆ ಎಂದಿದ್ದಾರೆ ಆದರೆ, ಯಾವ ರೀತಿಯ ಕನೆಕ್ಷನ್  ಕೂಡ ಇಲ್ಲ ಎಂದು ಪ್ರಶಾಂತ್ ನೀಲ್ ಅವರು ಸ್ಪಷ್ಟಪಡಿಸಿದ್ದಾರೆ.

‘ಅಭಿಮಾನಿಗಳು ಹೇಳಿದ ಎಲ್ಲಾ ಸಿದ್ಧಾಂತಗಳನ್ನು ನೋಡಿದ ಬಳಿಕ ಕೆಜಿಎಫ್ ಸಿನಿಮಾ ಎಷ್ಟು ದೊಡ್ಡದು ಎಂಬುದನ್ನು ನಾನು ಅರಿತುಕೊಂಡೆ. ಜನರು ಸಲಾರ್‌ನ ಟೋನ್‌ನ ಕೆಜಿಎಫ್‌ಗೆ ಹೋಲಿಸಲು ಪ್ರಾರಂಭಿಸಿದರು. ನಾನು ಈ ರೀತಿಯ ವಿಚಾರಗಳನ್ನು ಮೊದಲೇ ಗುರುತಿಸಬೇಕಾಗಿತ್ತು. ಕೆಜಿಎಫ್ ಯೂನಿವರ್ಸ್​ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಾನು ಮೊದಲೇ ಸ್ಪಷ್ಟಪಡಿಸಬೇಕಿತ್ತು’ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

Advertisement

ಮೇಕಿಂಗ್​ ನೋಡಿದ ಅನೇಕರು ‘ಸಲಾರ್’ ಹಾಗೂ ‘ಕೆಜಿಎಫ್ 2’ ಚಿತ್ರಕ್ಕೆ ಸಂಬಂಧ ಕಲ್ಪಿಸಿದ್ದರು. ‘ಸಲಾರ್’ ಟೀಸರ್ ಬಿಡುಗಡೆ ಸಮಯಕ್ಕೂ, ‘ಕೆಜಿಎಫ್ 2’ ಚಿತ್ರದಲ್ಲಿ ರಾಕಿ ಭಾಯ್ ಸಾಯುವ ಸಮಯಕ್ಕೂ ಒಂದು ಸಂಬಂಧ ಇತ್ತು. ಇದು ಕಾಕತಾಳಿಯವೋ ಅಥವಾ ನಿಜವಾಗಲೂ ಲಿಂಕ್ ಇದೆಯೋ ಎನ್ನುವ ಅನುಮಾನ ಮೂಡಿತ್ತು. ಆದರೆ, ಈಗ ರಿಲೀಸ್ ಆಗಿರೋ ಎರಡೂ ಟ್ರೇಲರ್​ನಲ್ಲಿ ಯಾವುದೇ ಲಿಂಕ್ ಕಂಡು ಬಂದಿಲ್ಲ.

Advertisement
Tags :
Advertisement