For the best experience, open
https://m.newskannada.com
on your mobile browser.
Advertisement

ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಸಮಂತಾ ನಾಯಕಿ

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್  ಅವರು ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಇದರ ನಡುವೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಕೂಡ ವಿಜಯ್ ಮುಗಿಸಿ ಕೊಡ್ತಿದ್ದಾರೆ. 
04:37 PM Mar 04, 2024 IST | Ashika S
ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಸಮಂತಾ ನಾಯಕಿ

ಮುಂಬೈ : ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್  ಅವರು ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಇದರ ನಡುವೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಕೂಡ ವಿಜಯ್ ಮುಗಿಸಿ ಕೊಡ್ತಿದ್ದಾರೆ.

Advertisement

ಲಿಯೋ’  ಚಿತ್ರದ ನಂತರ ವಿಜಯ್ 68ನೇ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಅಟ್ಲೀ  ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಇಬ್ಬರ ಕಾಂಬೋದಲ್ಲಿ ಮೆರ್ಸಲ್, ಬಿಗಿಲ್, ಹಾಗೂ ತೇರಿ, ಚಿತ್ರಗಳು ಮೂಡಿ ಬಂದಿತ್ತು. ಈಗ ಮತ್ತೆ ಈ ಜೋಡಿ ಒಂದಾಗಲು ನಿರ್ಧರಿಸಿದ್ದಾರಂತೆ.

ಈ ಚಿತ್ರದ ಶೂಟಿಂಗ್‌ನಲ್ಲಿ ವಿಜಯ್ ಸಕ್ರಿಯರಾಗಿದ್ದಾರೆ. ಈ ಬೆನ್ನಲ್ಲೇ ವಿಜಯ್ ನಟನೆಯ ಕೊನೆಯ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದೆ. ವಿಜಯ್ ಕೊನೆಯ ಚಿತ್ರದ ನಾಯಕಿ, ಪ್ರಾಜೆಕ್ಟ್ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.

Advertisement

ವಿಜಯ್ 69ನೇ ಚಿತ್ರಕ್ಕೆ ಸಮಂತಾ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣದ ಹೊಣೆ ಹೊತ್ತಿದೆ. ಈ ಸುದ್ದಿ ನಿಜನಾ? ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೂ ಕಾಯಬೇಕಿದೆ.

ಈ ಹಿಂದೆ ಕೂಡ ವಿಜಯ್-ಸಮಂತಾ ಕಾಂಬೋದಲ್ಲಿ ಮೆರ್ಸಲ್, ತೇರಿ ಸಿನಿಮಾ ಮೂಡಿ ಬಂದಿತ್ತು. ಇಬ್ಬರ ಕೆಮಿಸ್ಟ್ರಿ ಚಿತ್ರದಲ್ಲಿ ಮೋಡಿ ಮಾಡಿತ್ತು.

Advertisement
Tags :
Advertisement