For the best experience, open
https://m.newskannada.com
on your mobile browser.
Advertisement

ಭಾರತದಲ್ಲಿ ಇಂದು 6000mAh ಬ್ಯಾಟರಿಯ ಸ್ಯಾಮ್​ಸಂಗ್ ​ಫೋನ್ ಬಿಡುಗಡೆ

ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ ಕಂಪನಿ ಕೆಲವು ವಾರಗಳ ವಿರಾಮದ ಬಳಿಕ ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್​ನೊಂದಿಗೆ ಬರುತ್ತಿದೆ. ಇಂದು ದೇಶದಲ್ಲಿ ಸ್ಯಾಮ್​ಸಂಗ್ ತನ್ನ ಹೊಸ ಗ್ಯಾಲಕ್ಸಿ F15 5G (Samsung Galaxy F15 5G) ಅನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ಮಾಹಿತಿ ನೀಡಿದೆ.
08:18 AM Mar 04, 2024 IST | Ashitha S
ಭಾರತದಲ್ಲಿ ಇಂದು 6000mah ಬ್ಯಾಟರಿಯ ಸ್ಯಾಮ್​ಸಂಗ್ ​ಫೋನ್ ಬಿಡುಗಡೆ

ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ ಕಂಪನಿ ಕೆಲವು ವಾರಗಳ ವಿರಾಮದ ಬಳಿಕ ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್​ನೊಂದಿಗೆ ಬರುತ್ತಿದೆ. ಇಂದು ದೇಶದಲ್ಲಿ ಸ್ಯಾಮ್​ಸಂಗ್ ತನ್ನ ಹೊಸ ಗ್ಯಾಲಕ್ಸಿ F15 5G (Samsung Galaxy F15 5G) ಅನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ಮಾಹಿತಿ ನೀಡಿದೆ.

Advertisement

ಫ್ಲಿಪ್‌ಕಾರ್ಟ್‌ನಲ್ಲಿ ಮೀಸಲಾದ ಮೈಕ್ರೊಸೈಟ್ ಮುಂಬರುವ ಗ್ಯಾಲಕ್ಸಿ ಎಫ್-ಸರಣಿಯ ಸ್ಮಾರ್ಟ್‌ಫೋನ್‌ನ ವಿನ್ಯಾಸ ಮತ್ತು ಕೆಲವು ಫೀಚರ್ಸ್ ಬಗ್ಗೆ ಮಾಹಿತಿ ನೀಡಿದೆ. ಗ್ಯಾಲಕ್ಸಿ F15 5G ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ನಲ್ಲಿ ರನ್ ಮಾಡಲಾಗುತ್ತದೆ. ಇದರಲ್ಲಿ ಬರೋಬ್ಬರಿ 6,000mAh ಬ್ಯಾಟರಿ ನೀಡಲಾಗಿದೆ.

ಈ ಹ್ಯಾಂಡ್‌ಸೆಟ್ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಫ್ಲಿಪ್​ಕಾರ್ಟ್​ ಪಟ್ಟಿಯ ಪ್ರಕಾರ ಗ್ಯಾಲಕ್ಸಿ F15 5G ಫೋನ್ ಸೂಪರ್ AMOLED ಡಿಸ್​ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 6,000mAh ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

Advertisement

ಇದಲ್ಲದೆ, ಸ್ಯಾಮ್‌ಸಂಗ್ ಹೊಸ ಫೋನ್‌ಗೆ ನಾಲ್ಕು ತಲೆಮಾರುಗಳ ಆಂಡ್ರಾಯ್ಡ್ ನವೀಕರಣಗಳು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಗ್ಯಾಲಕ್ಸಿ ಎಫ್ 15 5 ಜಿ ಸ್ಮಾರ್ಟ್​ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಯೂನಿಟ್ ಅನ್ನು ಹೊಂದಿದೆ. ಹಾಗೆಯೆ ಸಿಂಗಲ್ ಸೆಲ್ಫಿ ಶೂಟರ್ ಅನ್ನು ಇರಿಸಲು ಡಿಸ್​ಪ್ಲೇ ಮೇಲೆ ವಾಟರ್‌ಡ್ರಾಪ್-ಶೈಲಿಯ ನಾಚ್ ಅನ್ನು ನೀಡಲಾಗಿದೆ.

Advertisement
Tags :
Advertisement