For the best experience, open
https://m.newskannada.com
on your mobile browser.
Advertisement

ಸಾನಿಯಾ‌ ಹೆಸರು ಕೂಗಿ ಶೋಯೆಬ್ 3ನೇ ಪತ್ನಿಗೆ ಕಾಟ ಕೊಟ್ಟ ಫ್ಯಾನ್ಸ್​: ವಿಡಿಯೋ ವೈರಲ್

ಪಾಕಿಸ್ತಾನ ಕ್ರಿಕೆಟ್ ಸೂಪರ್ ಲೀಗ್​ (ಪಿಎಸ್​​ಎಲ್​)ನ ಪಂದ್ಯ ನಡೆಯುತ್ತಿರುವ ವೇಳೆ ಕ್ರಿಕೆಟಿಗ ಶೋಯೆಬ್ ಮಲಿಕ್ ಪತ್ನಿ ಸನಾ ಜಾವೇದ್ ಭಾರೀ ಮುಖಭಂಗ ಅನುಭವಿಸಿದ್ದಾರೆ.
11:07 AM Feb 21, 2024 IST | Ashitha S
ಸಾನಿಯಾ‌ ಹೆಸರು ಕೂಗಿ ಶೋಯೆಬ್ 3ನೇ ಪತ್ನಿಗೆ ಕಾಟ ಕೊಟ್ಟ ಫ್ಯಾನ್ಸ್​  ವಿಡಿಯೋ ವೈರಲ್

ಪಾಕ್: ಪಾಕಿಸ್ತಾನ ಕ್ರಿಕೆಟ್ ಸೂಪರ್ ಲೀಗ್​ (ಪಿಎಸ್​​ಎಲ್​)ನ ಪಂದ್ಯ ನಡೆಯುತ್ತಿರುವ ವೇಳೆ ಕ್ರಿಕೆಟಿಗ ಶೋಯೆಬ್ ಮಲಿಕ್ ಪತ್ನಿ ಸನಾ ಜಾವೇದ್ ಭಾರೀ ಮುಖಭಂಗ ಅನುಭವಿಸಿದ್ದಾರೆ.

Advertisement

ಮೈದಾನದ ಬೌಂಡರಿ ಲೈನ್​ನಲ್ಲಿ ನಡೆದುಕೊಂಡು ಹೋಗುವಾಗ ಗ್ಯಾಲರಿಯಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳೆಲ್ಲ ಸಾನಿಯಾ ಮಿರ್ಜಾ.. ಸಾನಿಯಾ ಮಿರ್ಜಾ ಎಂದು ಕೂಗಿ ರೇಗಿಸಿದ್ದಾರೆ. ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ ನಡುವಿನ ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಶೋಯೆಬ್ ಮಲೀಕ್ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದಾರೆ. ಹೀಗಾಗಿ ಪತಿಯನ್ನು ಹುರಿದುಂಬಿಸಲು ಕ್ರೀಡಾಂಗಾಣಕ್ಕೆ ಪತ್ನಿ ಸನಾ ಜಾವೇದ್ ಬಂದಿದ್ದರು.

Advertisement

ಈ ವೇಳೆ ಮೈದಾನದ ಬೌಂಡರಿ ಲೈನ್​ನಲ್ಲಿ ನಡೆದುಕೊಂಡು ಹೋಗುವಾಗ ಗ್ಯಾಲರಿಯಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳೆಲ್ಲ ಸಾನಿಯಾ ಮಿರ್ಜಾ.. ಸಾನಿಯಾ ಮಿರ್ಜಾ ಎಂದು ಕೂಗಿದ್ದಾರೆ. ಆಗ ಎಲ್ಲರನ್ನು ಗುರಾಯಿಸಿಕೊಂಡು ಸನಾ ಹಾಗೇ ಮುಂದೆ ಹೋಗಿದ್ದಾರೆ. ಮೊದಲು ಸಾನಿಯಾ ಹೆಸರು ಕೂಗಿದವರತ್ತ ಕೈ ಬೀಸಿದ ಸನಾ, ನಂತರ ಸಿಟ್ಟಾಗಿ ಅಲ್ಲಿಂದ ಹೊರ ನಡೆದಿದ್ದಾರೆ.‌ ಸದ್ಯ ಈ ವಿಡಿಯೋ ವೈರಲ್‌ ಆಗ್ತಿದೆ.

Advertisement
Tags :
Advertisement