For the best experience, open
https://m.newskannada.com
on your mobile browser.
Advertisement

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ: ಸ್ಯಾಂಡಲ್​ವುಡ್ ಬಿಗ್ ಶಾಕ್

ಸ್ಯಾಂಡಲ್​ವುಡ್ ದಿಲ್​ದಾರ್ ನಿರ್ಮಾಪಕ ಸೌಂದರ್ಯ ಜಗದೀಶ್​ ಬದುಕಿನ ಪುಟಕ್ಕೆ ಅಂತಿಮ ವಿದಾಯ ಹೇಳಿದ್ದು, ಎಂತಹ ಕಷ್ಟವಿದ್ರೂ ಫೇಸ್​ ಮಾಡ್ತಿದ್ದ ಜಗದೀಶ್​ ನಿಧನ ಇಡೀ ಕುಟುಂಬಕ್ಕೆ ದಿಗ್ಬ್ರಮೆ ಮೂಡಿಸಿದೆ. ಗಟ್ಟಿ ಮನುಷ್ಯ ದಿಟ್ಟ ನಿರ್ಮಾಪಕ ಬದುಕಿಗೆ ವಿದಾಯ ಹೇಳೋ ನಿರ್ಧಾರ ಮಾಡಿದ್ದೇಕೆ ಎಂಬ ಗೊಂದಲ ಶುರುವಾಗಿದೆ.
09:15 PM Apr 14, 2024 IST | Nisarga K
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ  ಸ್ಯಾಂಡಲ್​ವುಡ್ ಬಿಗ್ ಶಾಕ್
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ: ಸ್ಯಾಂಡಲ್​ವುಡ್ ಬಿಗ್ ಶಾಕ್

ಬೆಂಗಳೂರು:  ಸ್ಯಾಂಡಲ್​ವುಡ್ ದಿಲ್​ದಾರ್ ನಿರ್ಮಾಪಕ ಸೌಂದರ್ಯ ಜಗದೀಶ್​ ಬದುಕಿನ ಪುಟಕ್ಕೆ ಅಂತಿಮ ವಿದಾಯ ಹೇಳಿದ್ದು, ಎಂತಹ ಕಷ್ಟವಿದ್ರೂ ಫೇಸ್​ ಮಾಡ್ತಿದ್ದ ಜಗದೀಶ್​ ನಿಧನ ಇಡೀ ಕುಟುಂಬಕ್ಕೆ ದಿಗ್ಬ್ರಮೆ ಮೂಡಿಸಿದೆ. ಗಟ್ಟಿ ಮನುಷ್ಯ ದಿಟ್ಟ ನಿರ್ಮಾಪಕ ಬದುಕಿಗೆ ವಿದಾಯ ಹೇಳೋ ನಿರ್ಧಾರ ಮಾಡಿದ್ದೇಕೆ ಎಂಬ ಗೊಂದಲ ಶುರುವಾಗಿದೆ.

Advertisement

ನಿರ್ಮಾಪಕ ಸೌಂದರ್ಯ ಜಗದೀಶ್​ ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ತಮ್ಮ ಮನೆಯಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜಗದೀಶ್​ ರವರನ್ನು ಆಸ್ಪತ್ರೆಗೆ ದಾಖಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.

ಆರಂಭದಲ್ಲಿ ಇದು ಸೂಸೈಡಾ? ಅಥವಾ ಹೃದಯಾಘಾತನಾ ಅನ್ನೋ ಅನುಮಾನಗಳು ಮೂಡಿದರು, ಕೊನೆಗೆ ಜಗದೀಶ್​ ಆಪ್ತ ಸ್ಮೇಹಿತ ಶ್ರೇಯಸ್ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಜಗದೀಶ್ ಸಾವು ಆತ್ಮಹತ್ಯೆಯೇ ಅಂತ ಸ್ಪಷ್ಟನೆ ನೀಡಿದ್ದಾರೆ.

Advertisement

ಬೆಳಗ್ಗೆ 9 ಗಂಟೆ ಹೊತ್ತಿಗೆ ಜಗದೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಯತ್ನಿಸಿದ್ದಾರೆ. ಆದ್ರೆ, ಪ್ರಾಣ ಹೋಗುವ ಮುನ್ನ ಜಗದೀಶ್ ಮನೆಯವರು ನೋಡಿ ಆಸ್ಪತ್ರೆ ಕರ್ಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ತಂದ ಬಳಿಕ ವೈದ್ಯರು ಉಸಿರು ನಿಂತಿರೋ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಡೀ ಕುಟುಂಬಕ್ಕೆ ದಿಗ್ಭ್ರಮೆ ಮೂಡಿದಂತಾಗಿದೆ.

ಶನಿವಾರ ರಾತ್ರಿ 11.30 ವರೆಗೂ ಜಗದೀಶ್ ಕ್ರಿಕೆಟ್ ನೋಡಿದ್ದರು. ಮದುವೆ ವಿಚಾರವಾಗಿ ಜರ್ಮನಿಯಲ್ಲಿರೋ ನಾದಿನಿ ಮಗನ ಜೊತೆ ಫೋನ್​ನಲ್ಲೂ ಮಾತನಾಡಿದ್ದಾರೆ.ಭಾನುವಾರ ಬೆಳಗ್ಗೆ ಜಗದೀಶ್ ಮನೆಯವರೆಲ್ಲ ಜರ್ಮನಿಯಲ್ಲಿರುವ ನಾದಿನಿ ಮಗನಿಗಾಗಿ ಹೆಣ್ಣು ನೋಡೋದಕ್ಕೆ ಅಂತ ಹೋಗ್ಬೆಕಿತ್ತು. ಇದೇ ಕಾರಣಕ್ಕೆ ಜಗದೀಶ್​ ನಾದಿನಿ ಮನೆಯವರು ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಮನೆಗೆ ಬಂದಾಗ, ಜಗದೀಶ್​ ಮನೆಯ ಅಡುಗೆ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಯಾರನ್ನೇ ಕೇಳಿದ್ರೂ ಜಗದೀಶ್ ಒಳ್ಳೆ ವ್ಯಕ್ತಿ. ಎಲ್ಲರ ಜೊತೆ ಒಡನಾಟ ಹೊಂದಿದ್ದ ಮನುಷ್ಯ ಸಡನ್ ಆಗಿ ಯಾಕೆ ಹೀಗ್ ಮಾಡ್ಕೊಂಡ ಅಂತ ಅಚ್ಚರಿಗೊಂಡಿದ್ದಾರೆ. ಹೀಗಾಗಿ ಜಗದೀಶ್​ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ರೂ ಒಂದಷ್ಟು ವಿಚಾರಗಳು ಜಗದೀಶ್​​ರನ್ನ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ವು ಅನ್ನೋದು ಬಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಸೌಂದರ್ಯ ಜಗದೀಶ್ ಒಂದೆರಡು ಸಿನಿಮಾಗಳನ್ನು ಮಾಡಿದ್ದರು. ಇವರು ಬ್ಯುಸಿನೆಸ್​​ನಲ್ಲೂ ನಷ್ಟ ಅನುಭವಿಸಿದ್ದರು. ಜೊತೆಗೆ ಕೆಲ ದಿನಗಳ ಹಿಂದೆ ರಾಜಾಜಿನಗರದ 5 ಮತ್ತು 6 ನೇ ಬ್ಲಾಕ್​​ನಲ್ಲಿರೋ ಮನೆಯನ್ನ ಸೀಜ್ ಮಾಡಲಾಗಿತ್ತು. ಈ ವಿಚಾರಗಳು ಜಗದೀಶ್​ ತಲೆಯಲ್ಲಿ ಕೊರಿತೀತ್ತಾ ಅನ್ನೋ ಅನುಮಾನ ವ್ಯಕ್ತವಾಗಿದೆ.

ಸೌಂದರ್ಯ ಜಗದೀಶ್​ ಅತ್ತೆ ಕೆಲ ದಿನಗಳ ಹಿಂದಷ್ಟೆ ಸಾವನ್ನಪ್ಪಿದ್ದರು. ಇದರ ಜೊತೆಗೆ ಜಗದೀಶ್ ಒಡೆತನದ ಜೆಟ್​ಲ್ಯಾಗ್​ ಹೋಟೆಲ್ ಕಾಟೇರ ಸಕ್ಸಸ್ ಪಾರ್ಟಿಯಿಂದ ವಿವಾದಕ್ಕೆ ಕಾರಣವಾಗಿತ್ತು. ಅಲ್ಲೂ ಸೌಂದರ್ಯ ಜಗದೀಶ್ ಹೆಸರು ತಳುಕು ಹಾಕಿಕೊಂಡಿತ್ತು. ಪರಿಣಾಮ ಬರೋಬ್ಬರಿ 15 ದಿನಗಳ ಕಾಲ ಜೆಟ್​ಲ್ಯಾಗ್ ಹೋಟೆಲ್​ನನ್ನ ಮುಚ್ಚಲಾಗಿತ್ತು.

ಸೌಂದರ್ಯ ಜಗದೀಶ್ ಮಗ ಸ್ನೇಹಿತ್​ ಕೂಡ ವಿವಾದಕ್ಕೆ ಕಾರಣವಾಗಿದ್ದ. ಮೂರು ವರ್ಷದ ಹಿಂದೆ ನಡೆದಿದ್ದ ಸ್ನೇಹಿತ್ ಗಲಾಟೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಪಕ್ಕದ ಮನೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ನೇಹಿತ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇನ್ನೊಂದೆಡೆ ಎರಡು ತಿಂಗಳ ಹಿಂದಷ್ಟೆ ಸೌಂದರ್ಯ ಜಗದೀಶ್ ಮಗಳ ಮದುವೆ ಕೂಡ ಮಾಡಿದ್ರು. ಹೀಗಾಗಿ ಈ ಎಲ್ಲ ವಿಚಾರಗಳು ಜಗದೀಶ್ ಆತ್ಮಹತ್ಯೆಗೆ ಕಾರಣವಾಯ್ತಾ? ಎಂಬುದು ಪ್ರಶ್ನೆಯಾಗಿದೆ.

ಸೌಂದರ್ಯ ಜಗದೀಶ್ ನಿಧನಕ್ಕೆ ಸ್ಯಾಂಡಲ್​ವುಡ್​ ಮಂದಿ ಭಾವುಕರಾಗಿದ್ದಾರೆ. ಜಗದೀಶ್ ಯಾವುದೇ ತರಹದ ನೋವು ತೋರಿಸಿಕೊಳ್ಳುತ್ತಿರಲಿಲ್ಲ. ಏನೇ ಬಂದ್ರು ದಿಲ್​ದಾರರಾಗಿ ಫೇಸ್ ಮಾಡುತ್ತಿದ್ದರು. ಆದ್ರೆ ಇಂಥಾ ದಿಲ್​ದಾರ್ ಮನುಷ್ಯ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರೋದು ಸ್ಯಾಂಡಲ್​ವುಡ್ ಮಂದಿಗೆ ಬಿಗ್ ಶಾಕ್ ನೀಡಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ನಟ ಪ್ರೇಮ್ ಪತ್ನಿ ಸಮೇತ ಸುಗುಣ ಆಸ್ಪತ್ರೆಗೆ ಭೇಟಿ ನೀಡಿ ಜಗದೀಶ್​ ಕುಟುಂಬಕ್ಕೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ನಟ ಪ್ರೇಮ್, ನಾಳೆ ಮನೆಗೆ ಬನ್ನಿ ಮೀಟ್ ಮಾಡೋಣ ಅಂದಿದ್ರು. ಆದ್ರೆ ಬೆಳಗ್ಗೆ ಅವರ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು. ಜಗದೀಶ್ ಕಷ್ಟ ಅಂತ ಬಂದ್ರೆ ಎಲ್ಲರಿಗೂ ಸಹಾಯ ಮಾಡ್ತಿದ್ರು. ಅಪರೂಪದ ಸ್ನೇಹ ಕಳೆದುಕೊಂಡು ತುಂಬಾ ದುಃಖ ಆಗ್ತಿದೆ ಎಂದರು.

ಸ್ಯಾಂಡಲ್​ವುಡ್​ ದಿಲ್​ದಾರ್ ನಿರ್ಮಾಪಕ ಅಂತಾನೇ ಗುರುತಿಸಿಕೊಂಡಿದ್ದ ಸೌಂದರ್ಯ ಜಗದೀಶ್ ಸಾವು ನಿಜಕ್ಕೂ ಇಂಡಸ್ಟ್ರಿಗೆ ದೊಡ್ಡ ಶಾಕ್ ನೀಡಿದೆ. ಸಿನಿಮಾ ರಂಗದಲ್ಲಿ ಇಷ್ಟೆಲ್ಲ ಸ್ನೇಹಿತರ ಬಳಗ ಪಡೆದಿರೋ ಜಗದೀಶ್ ದುಡುಕಿನ ನಿರ್ಧಾರ ಕೈಗೊಂಡಿರೋದು ನಿಜಕ್ಕೂ ದುರಂತ.

Advertisement
Tags :
Advertisement