ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಗಳ ಡಿವೋರ್ಸ್​​ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾನಿಯಾ ಮಿರ್ಜಾ ತಂದೆ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಪತಿ ಪಾಕಿಸ್ತಾನದ ಮಾಜಿ ಕ್ರಿಕೆಟರ್​​ ಶೋಯೆಬ್ ಮಲಿಕ್ 3ನೇ ಮದುವೆ ಆಗಿದ್ದಾರೆ. ಶೋಯೆಬ್ ಮೊದಲ ಪತ್ನಿಯಿಂದ ದೂರ ಆಗಿ ಸಾನಿಯಾರನ್ನ ಎರಡನೇ ಮದುವೆಯಾಗಿದ್ದರು. ಕಳೆದ 12 ವರ್ಷಗಳಿಂದ ಶೋಯೆಬ್ ಮತ್ತು ಸಾನಿಯಾ ಪರಸ್ಪರ ಜೊತೆಯಲ್ಲೇ ಇದ್ದರು. ಇಬ್ಬರಿಗೂ ಒಬ್ಬ ಮಗ ಕೂಡ ಇದ್ದಾನೆ. ಸದ್ಯ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನ ಪಡೆದು ಪಾಕ್​​​​ ನಟಿ ಸನಾ ಜಾವೇದ್ ಅವರನ್ನು ಮೂರನೇ ಮದುವೆ ಆಗಿದ್ದಾರೆ.
09:35 AM Jan 21, 2024 IST | Gayathri SG

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಪತಿ ಪಾಕಿಸ್ತಾನದ ಮಾಜಿ ಕ್ರಿಕೆಟರ್​​ ಶೋಯೆಬ್ ಮಲಿಕ್ 3ನೇ ಮದುವೆ ಆಗಿದ್ದಾರೆ. ಶೋಯೆಬ್ ಮೊದಲ ಪತ್ನಿಯಿಂದ ದೂರ ಆಗಿ ಸಾನಿಯಾರನ್ನ ಎರಡನೇ ಮದುವೆಯಾಗಿದ್ದರು. ಕಳೆದ 12 ವರ್ಷಗಳಿಂದ ಶೋಯೆಬ್ ಮತ್ತು ಸಾನಿಯಾ ಪರಸ್ಪರ ಜೊತೆಯಲ್ಲೇ ಇದ್ದರು. ಇಬ್ಬರಿಗೂ ಒಬ್ಬ ಮಗ ಕೂಡ ಇದ್ದಾನೆ. ಸದ್ಯ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನ ಪಡೆದು ಪಾಕ್​​​​ ನಟಿ ಸನಾ ಜಾವೇದ್ ಅವರನ್ನು ಮೂರನೇ ಮದುವೆ ಆಗಿದ್ದಾರೆ.

Advertisement

ಈ ಬಗ್ಗೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್​ ಮಿರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗಳು ಶೋಯೆಬ್​ ಅವರಿಗೆ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಮದುವೆಯ ಬಂಧದಿಂದ ತನ್ನನ್ನು ಬಿಡುಗಡೆ ಮಾಡುವಂತೆ ಪತಿಗೆ ಮಹಿಳೆ ತಿಳಿಸುವ ಕ್ರಮ ಎಂದು ಹೇಳಿದ್ದಾರೆ.

ಇಬ್ಬರು 4 ತಿಂಗಳ ಹಿಂದೆಯೇ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ಶೋಯೆಬ್ ಕಳೆದ ಮೂರು ವರ್ಷಗಳಿಂದ ಸನಾ ಜಾವೇದ್​​ ನೊಂದಿಗೆ ಡೇಟಿಂಗ್​ ಮಾಡುತ್ತಿದ್ದರು. ಈ ವಿಚಾರ ಗೊತ್ತಾದ ಮೇಲೆ ಸಾನಿಯಾ, ಶೋಯೆಬ್​​ ಮಧ್ಯೆ ಜಗಳ ಆಗಿತ್ತು. ಈಗ ಇಬ್ಬರು ಡಿವೋರ್ಸ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Advertisement

Advertisement
Tags :
BreakingNewsLatestNewsNewsKannadaಡಿವೋರ್ಸ್ಸಾನಿಯಾ ಮಿರ್ಜಾ
Advertisement
Next Article