For the best experience, open
https://m.newskannada.com
on your mobile browser.
Advertisement

ಟಿ20 ವಿಶ್ವಕಪ್‌ : ಟೀಮ್‌ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ

ಒಳ್ಳೆ ಕ್ಯಾಪ್ಟನ್ಸಿ ಜತೆಗೆ ಅತ್ಯುತ್ತಮ ಪ್ರದರ್ಶನ ನೀಡಿರೋ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. ಇವರ ಆಟಕ್ಕೆ ಫಿದ ಆಗಿರುವ ಅಭಿಮಾನಿಗಳಿಗೆ ಈ ವಿಚಾರ ಖುಷಿ ತಂದಿದೆ.
07:50 PM Apr 30, 2024 IST | Nisarga K
ಟಿ20 ವಿಶ್ವಕಪ್‌   ಟೀಮ್‌ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ
ಟಿ20 ವಿಶ್ವಕಪ್‌ : ಟೀಮ್‌ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ

ಬೆಂಗಳೂರು: ಒಳ್ಳೆ ಕ್ಯಾಪ್ಟನ್ಸಿ ಜತೆಗೆ ಅತ್ಯುತ್ತಮ ಪ್ರದರ್ಶನ ನೀಡಿರೋ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. ಇವರ ಆಟಕ್ಕೆ ಫಿದ ಆಗಿರುವ ಅಭಿಮಾನಿಗಳಿಗೆ ಈ ವಿಚಾರ ಖುಷಿ ತಂದಿದೆ.

Advertisement

ಐಪಿಎಲ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರೋ ಸಂಜು ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ 2ನೇ ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್ ಅವರನ್ನೇ ಹಿಂದಿಕ್ಕಿ ಸ್ಥಾನ ಪಡೆದಿದ್ದಾರೆ.

ಸಂಜು ಸ್ಯಾಮ್ಸನ್​ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದೆ. ಈ ಸೀಸನ್​ನಲ್ಲಿ ಸಂಜು ಆಡಿದ 9 ಪಂದ್ಯಗಳಿಂದ 385 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಇದ್ದಾರೆ. ಇವರ ಆವರೇಜ್​​​ 77 ಮತ್ತು ಸ್ಟ್ರೈಕ್​ ರೇಟ್​​ 161ಕ್ಕೂ ಹೆಚ್ಚಿದೆ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಇದಾಗಿದೆ.

Advertisement

Advertisement
Tags :
Advertisement