For the best experience, open
https://m.newskannada.com
on your mobile browser.
Advertisement

ರಾಜಕೀಯ ಪಕ್ಷಗಳು ಹೆಮ್ಮರವಾಗಿ ಬೆಳೆಯಲು ಈ ವ್ಯಕ್ತಿಯೇ ಕಾರಣ ಅಂತೆ !

ಪಕ್ಷವೊಂದು ರಾಷ್ಟ್ರೀಯ ಪಕ್ಷವಾಗಿ ಬೆಳೆಯಲು ಹಣ ತುಂಬಾನೆ ಮುಖ್ಯ. ದೇಶದ ಬಹುತೇಕ ಪಕ್ಷಗಳಿಗೆ ದೇಣಿಗೆ ಬರುತ್ತದೆ. ಅನೇಕರು ಪಕ್ಷದ ಉದ್ಧಾರಕ್ಕಾಗಿ ದೇಣಿಗೆ ನೀಡುವವರು ಇದ್ದಾರೆ. ಆದರಿಂದ ರಾಜಕೀಯ ಪಕ್ಷಗಳು ಹೆಮ್ಮರವಾಗಿ ಬೆಳೆಯುತ್ತಿವೆ. ಭಾರತದಲ್ಲೂ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದವರು ಇದ್ದಾರೆ. ಸದ್ಯ ಅವರಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿದವರು ಯಾರು ಎನ್ನುವ ಪ್ರಶ್ನೆಗೆ ಉತ್ತರವೊಂದು ಸಿಕ್ಕಿದೆ.
12:29 PM Mar 15, 2024 IST | Ashitha S
ರಾಜಕೀಯ ಪಕ್ಷಗಳು ಹೆಮ್ಮರವಾಗಿ ಬೆಳೆಯಲು ಈ ವ್ಯಕ್ತಿಯೇ ಕಾರಣ ಅಂತೆ

ದೆಹಲಿ: ಪಕ್ಷವೊಂದು ರಾಷ್ಟ್ರೀಯ ಪಕ್ಷವಾಗಿ ಬೆಳೆಯಲು ಹಣ ತುಂಬಾನೆ ಮುಖ್ಯ. ದೇಶದ ಬಹುತೇಕ ಪಕ್ಷಗಳಿಗೆ ದೇಣಿಗೆ ಬರುತ್ತದೆ. ಅನೇಕರು ಪಕ್ಷದ ಉದ್ಧಾರಕ್ಕಾಗಿ ದೇಣಿಗೆ ನೀಡುವವರು ಇದ್ದಾರೆ. ಆದರಿಂದ ರಾಜಕೀಯ ಪಕ್ಷಗಳು ಹೆಮ್ಮರವಾಗಿ ಬೆಳೆಯುತ್ತಿವೆ. ಭಾರತದಲ್ಲೂ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದವರು ಇದ್ದಾರೆ. ಸದ್ಯ ಅವರಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿದವರು ಯಾರು ಎನ್ನುವ ಪ್ರಶ್ನೆಗೆ ಉತ್ತರವೊಂದು ಸಿಕ್ಕಿದೆ.

Advertisement

ಹೌದು. . .ಚುನಾವಣಾ ಆಯೋಗವು ರಾಜಕೀಯ ದೇಣಿಗೆ ನೀಡಿದ ಪಟ್ಟಿಯನ್ನು ಗುರುವಾರದಂದು ರಿಲೀಸ್​ ಮಾಡಿದೆ. ಸುಪ್ರೀಂ ಕೋರ್ಟ್​ ಮತ್ತು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ನೀಡಿದ ವಿವರಗಳಲ್ಲಿ ಸ್ಯಾಂಟಿಯಾಗೊ ಮಾರ್ಟಿನ್ ಅವರ ಹೆಸರು ಕೇಳಿಬಂದಿದೆ. ಇವರನ್ನು ‘ಲಾಟರಿ ಕಿಂಗ್​’ ಎಂದು ಕರೆಯಲಾಗುತ್ತದೆ.

ಸ್ಯಾಂಟಿಯಾಗೊ ಮಾರ್ಟಿನ್ ಫ್ಯೂಚರ್​ ಗೇಮಿಂಗ್​ ಮತ್ತು ಹೋಟೆಲ್​​ ಸರ್ವಿಸಸ್​​ ಪ್ರೈವೇಟ್​​ ಲಿಮಿಡೆಟ್​​ ಹೆಸರಿನ ಕಂಪನಿಯ ಮೂಲಕ ದೊಡ್ಡ ಮೊತ್ತದ ದೇಣಿಗೆ ನೀಡುತ್ತಾ ಬಂದಿದ್ದಾರೆ.

Advertisement

ಫ್ಯೂಚರ್​ ಗೇಮಿಂಗ್ ಮತ್ತು ಹೋಟೆಲ್​ ಸರ್ವೀಸಸ್​ ಪ್ರೈವೇಟ್​ ಲಿಮಿಟೆಡ್​​ 2019 ಮತ್ತು 2024ರ ನಡುವೆ 1368 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದೆ. ಮೇಲೆ 2019ರಿಂದ ಜಾರಿ ನಿರ್ದೇಶನಾಲಯವು ​ಸ್ಯಾಂಟಿಯಾಗೊ ಮಾರ್ಟಿನ್ ಅವರ ಕಂಪನಿ ವಿರುದ್ಧ ಪಿಎಂಎಲ್​ ಕಾನೂನು ಉಲ್ಲಂಘಿಸಿದೆ ಎಂದು ಆರೋಪಿಸಿ ತನಿಖೆ ನಡೆಸುತ್ತಿದೆ. 2023ರ ಮೇ ತಿಂಗಳಿನಲ್ಲಿ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಸ್ಯಾಂಟಿಯಾಗೊ ಅವರ ವ್ಯವಹಾರದ ಮೇಲೆ ಸಿಕ್ಕಿಂ ಸರ್ಕಾರವು ಲಾಟರಿ ಮಾರಾಟ ಮಾಡಿಸಿದೆ ಎಂದು ಆರೋಪಿಸಿ ಕೇಂದ್ರದ ತನಿಖಾ ದಳಕ್ಕೆ ಚಾರ್ಜ್​ ಶೀಟ್​ ಸಲ್ಲಿಸಿತ್ತು. ಇದೇ ವಿಚಾರವಾಗಿ ಇಡಿ ವಿಚಾರಣೆಯನ್ನು ಎದುರಿಸಿದೆ.

ಇನ್ನು ಚುನಾವಣಾ ಸಮಿತಿ ಹಂಚಿಕೊಂಡ ಮಾಹಿತಿ ಪ್ರಕಾರ, ಸ್ಪೈಸ್‌ಜೆಟ್, ಇಂಡಿಗೋ, ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಎಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್, ಸುಲಾ ವೈನ್ಸ್, ವೆಲ್ಸ್‌ಪನ್, ಸನ್ ಫಾರ್ಮಾ, ವರ್ಧಮಾನ್ ಟೆಕ್ಸ್‌ಟೈಲ್ಸ್, ಜಿಂದಾಲ್ ಗ್ರೂಪ್, ಫಿಲಿಪ್ಸ್ ಕಾರ್ಬನ್ ಬ್ಲಾಕ್ ಲಿಮಿಟೆಡ್, ಸಿಯೆಟ್ ಟೈರ್ಸ್, ಡಾ ರೆಡ್ಡೀಸ್ ಲ್ಯಾಬೋರೇಟರೀಸ್, ಐಟಿಸಿ, ಕೇಪೀ ಎಂಟರ್‌ಪ್ರೈಸಸ್, ಸಿಪ್ಲಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಕೂಡ ಸೇರಿವೆ ಎಂದು ತಿಳಿಸಿದೆ.

Advertisement
Tags :
Advertisement