For the best experience, open
https://m.newskannada.com
on your mobile browser.
Advertisement

ಸರ್ಫರಾಜ್​ ಖಾನ್​​ಗೆ ಕ್ಷಮೆ ಕೇಳಿದ ರವೀಂದ್ರ ಜಡೇಜಾ

ರಾಜ್​ಕೋಟ್​ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಟೆಸ್ಟ್​​ ಪಂದ್ಯದ ಮೊದಲನೇ ಇನ್ನಿಂಗ್ಸ್​ನಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ. 131 ಓವರ್​​ನಲ್ಲಿ 445 ರನ್​​ಗೆ ಆಲೌಟ್​​ ಆಗಿದೆ.
09:00 PM Feb 16, 2024 IST | Gayathri SG
ಸರ್ಫರಾಜ್​ ಖಾನ್​​ಗೆ ಕ್ಷಮೆ ಕೇಳಿದ ರವೀಂದ್ರ ಜಡೇಜಾ

ರಾಜ್​ಕೋಟ್​ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಟೆಸ್ಟ್​​ ಪಂದ್ಯದ ಮೊದಲನೇ ಇನ್ನಿಂಗ್ಸ್​ನಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ. 131 ಓವರ್​​ನಲ್ಲಿ 445 ರನ್​​ಗೆ ಆಲೌಟ್​​ ಆಗಿದೆ.

Advertisement

ಇನ್ನು, ಟೀಮ್ ಇಂಡಿಯಾದ ಕ್ಯಾಪ್ಟನ್​​ ರೋಹಿತ್ ಶರ್ಮಾ 131 ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ 112 ಹಾಗೂ ಸರ್ಫರಾಜ್ ಖಾನ್ ಅಮೋಘ 62 ರನ್​ ಸಿಡಿಸಿದ್ರು. ಸರ್ಫರಾಜ್​​​ ಖಾನ್​​ ತನ್ನ ಮೊದಲ ಪಂದ್ಯದಲ್ಲೇ ಭರವಸೆ ಮೂಡಿಸಿದ್ರು. ಆದರೆ, ವಿನಾಕಾರಣ ರನೌಟ್​ ಆದರು. ತಮ್ಮ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಸರ್ಫರಾಜ್ ಖಾನ್ ರನೌಟ್ ಆಗಿದ್ದಕ್ಕೆ ರವೀಂದ್ರ ಜಡೇಜಾ ಕ್ಷಮೆಯಾಚಿಸಿದ್ದಾರೆ. ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ಸ್ಟೋರಿ ಹಾಕಿದ್ದ ಜಡೇಜಾ, ಸರ್ಫರಾಜ್ ಖಾನ್ ರನೌಟ್​ಗೆ ನಾನೇ ಕಾರಣ ಎಂದಿದ್ದಾರೆ.

ರನೌಟ್ ಆಗಿದ್ದು ಸರ್ಫರಾಜ್ ಖಾನ್‌ಗೆ ಬೇಸರ ತರಿಸಿದೆ. ಅದು ನನ್ನ ತಪ್ಪು ನಿರ್ಧಾರ. ಚೆನ್ನಾಗಿ ಆಡಿದ್ದೀಯಾ ಸರ್ಫರಾಜ್ ವೆಲ್ ಡನ್ ಎಂದು ರವೀಂದ್ರ ಜಡೇಜಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

Advertisement

Advertisement
Tags :
Advertisement