ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟೀಮ್ ಸತ್ಯಜಿತ್‌ ಸುರತ್ಕಲ್ ವತಿಯಿಂದ ಜನಾಗ್ರಹ ಸಮಾವೇಶ: ಟಿಕೆಟ್ ನೀಡುವಂತೆ ಆಗ್ರಹ

ಸತ್ಯಜಿತ್‌ ಸುರತ್ಕಲ್‌ಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಆಗ್ರಹಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
02:58 PM Feb 26, 2024 IST | Ashika S

ಮಂಗಳೂರು: ಸತ್ಯಜಿತ್‌ ಸುರತ್ಕಲ್‌ಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಆಗ್ರಹಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

Advertisement

ಈ ಸಮಾವೇಶದಲ್ಲಿ ಮಾತನಾಡಿದ ಹಿಂದೂ ಮುಖಂಡ ಸತ್ಯಜಿತ್‌ ಸುರತ್ಕಲ್ ನನಗೆ ಶಾಸಕ ಸಂಸದ ಮಂತ್ರಿ ಆಗಿ ಏನು ಆಗಬೇಕಾದುದು ಏನು ಇಲ್ಲ. ವೈಯಕ್ತಿಕ ಜೀವನಕ್ಕೂ ಅದು ಅವಶ್ಯಕತೆ ಇಲ್ಲ. ಕಾರ್ಯಕರ್ತರು ಲೋಕಸಭೆಗೆ ಅಪೇಕ್ಷೆ ಪಟ್ಟಿದ್ದಾರೆ. ಕಾರ್ಯಕರ್ತರ ಸಮಸ್ಯೆ ಗೊತ್ತಿದವರು ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಇಲ್ಲ. ನಾನು ರಾಜಕೀಯ ಬರ ಬಾರದು ಅಂತ ಕೆಲವರಿಗೆ ಇತ್ತು.

ಎಂಟು ವರ್ಷದ ಹಿಂದೆ ಹೋಮ್ ಸ್ಟೇ ಘಟನೆ ನಡೆದಾಗ ನಮ್ಮವರೆ ವಿರುದ್ಧ ನಿಂತುಕೊಂಡರು. ಇನಷ್ಟು ಸಮಯ ಜೈಲಿನಲ್ಲೇ ಇರುವಂತಾಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತರು ರಾಜಕೀಯಕ್ಕೆ ಹೋಗಿ ಅಂತ ಹೇಳಿದ್ದರು. ಮೊದಲು ರಾಜಕೀಯ ದುಡಿ ಮತ್ತೆ ಅಧಿಕಾರ ಅಂತ ಪಕ್ಷದಲ್ಲಿ ಹೇಳಿದರು. ಸಂಘಟನೆಯಲ್ಲಿ ಇದ್ದವರು ನೇರವಾಗಿ ಸ್ಪರ್ಧೆ ಮಾಡುತ್ತಾರೆ. ಆದ್ರೆ ನನಗೆ ಮಾತ್ರ ದುಡಿ ಮತ್ತೆ ಅಧಿಕಾರ ಅಂತ ಹೇಳಿದರು.

Advertisement

ಜೀವನ ಪಣವಾಗಿ‌ ಇಟ್ಟು ಸಮಾಜಕ್ಕೆ ಹೋರಾಡಿದ್ದೇನೆ. ಮೊದಲು ಹಿಂದುಳಿದ ವರ್ಗದ ಜವಾಬ್ದಾರಿ ಕೊಟ್ಟು ಜಾತಿ ವ್ಯವಸ್ಥೆಗೆ ದೂಡಿದರು. ಮನಸ್ಸಿಲ್ಲದಿದರು ಒಪ್ಪಿ ದುಡಿದೆ, ನಂತರ ಶಾಸಕ ಸ್ಥಾನದ ಟಿಕೆಟ್ ಕೇಳುವ ಸಂಧರ್ಭ ಹಿರಿಯರು ಹಿಂದುತ್ವ ಒಂದೇ ಮಾನದಂಡ ಅಲ್ಲ ಹೇಳಿದರು. ಯಾವುದೋ ಪಕ್ಷದಲ್ಲಿ ಇದ್ದ ವ್ಯಕ್ತಿಗೆ ಟಿಕೆಟ್ ನೀಡಿದಾಗ ಬೇಸರವಾಯಿತು. ತಪ್ಪಾಗಿದೆ ಅಂತ ಹೇಳಿ ಪಕ್ಷಕ್ಕಾಗಿ ದುಡಿ ಅಂತ ಕೂಡ ಹೇಳಿಲ್ಲ.

ಬಿಜೆಪಿ ಕಚೇರಿಗೆ ಬರಬೇಡಿ ಅಂತ ಕರೆ ಮಾಡಿ ಹೇಳಿಲ್ಲ. ಯಾವುದೇ ಜವಾಬ್ದಾರಿ ಕೊಡದೇ ಬಿಜೆಪಿ ಕಚೇರಿಗೆ ಹೋಗುವುದು ಹೇಗೆ. ನಂತರ ಯಡಿಯೂರಪ್ಪ ಸೂಕ್ತ ಸ್ಥಾನ ಮಾನ ಕೊಡುತ್ತೇನೆ ಅಂತ ತಿಂಡಿ ತಿನ್ನುತ್ತಾ ಹೇಳಿದ್ದರು. ಅವರಿಂದ ಕೂಡ ನಂತರದಲ್ಲಿ ಯಾವುದೇ ಮಾತು ಬರಲಿಲ್ಲ. ಬದಲಾಗಿ ಬಂದ ಮಾತು ಸತ್ಯನನ್ನು ಮುಗಿಸಿದ್ದೇವು ಅಂತ ಹೇಳಿದರು. ಮಂಗಳೂರಿನ ಕೋರ್ಟ್ ನಲ್ಲಿ ಸತ್ಯ ಸ್ಕ್ಯಾಫ್ ಅಂತ ಹೇಳಿದರು.

ಅನ್ಯಾಯ ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಅವ್ಯವಸ್ಥೆ ಸರಿ ಮಾಡುದಕ್ಕೆ ನನ್ನ ಹೋರಾಟ. ಮೋದಿ ಅಲೆ ಇದೆ ಹಿಂದುತ್ವ ಬಲವಾಗಿದೆ ಅಂತ ಕಾರ್ಯಕರ್ತರ ಭಾವನೆ ಬೆಲೆ ಕೊಡುದಿಲ್ಲ. 16 ವರ್ಷದಿಂದ ಇದ್ದ ಗನ್ ಮ್ಯಾನ್‌ನನ್ನು ಹಿಂದುತ್ವ ಸರ್ಕಾರ ಅಂತ ಹೇಳಿಕೊಂಡ ಬಂದ ಸರ್ಕಾರ ಹಿಂತೆಯಿತು. ವಿಧಾನಸಭಾ ಚುನಾವಣಾ ಎರಡು ದಿವಸ ಹಿಂದೆ ಬಂದವರಿಗೆ ಸತ್ಯ ಮಾರಾಟವಾಗುವ ವ್ಯಕ್ತಿ ಅಲ್ಲ ಅಂತ ಹೇಳಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಜೊತೆ ಮಾತುಕತೆ ಆದ ಪೋಟೋ ವೈರಲ್ ಆಗಿತ್ತು. ನಂತರ ನಾನು ಅನಿವಾರ್ಯ ಅಲ್ಲ ಅಂತ ಹೇಳಿದವರು ನನ್ನ ಬೇಡಿಕೆ ಏನು ಕೇಳಿದರು. ಲೋಕಸಭಾ ಚುನಾವಣಾ ಟಿಕೆಟ್ ಕೊಡಿ ಅಂತ ಕೇಳಿದೆ. ನಂತರ ಬೆಂಗಳೂರಿನಿಂದ ಕರೆ ಬಂದಾಗ ಕಾರ್ಯಕಾರಿಣಿ ಅಂತ ಹೇಳಿದ್ದರು. ಆ ಜವಾಬ್ದಾರಿ ಬೇಡ ಅಂತ ದೂರ ಉಳಿದೆ. ಎರಡೇ ಅವಧಿ ಸಾಕು ನನಗೆ ಮತ್ತೆ ನನಗೆ ಅವಕಾಶ ಬೇಡ. ಒಳ ಒಪ್ಪಂದದ ರಾಜಕೀಯ ಮಾಡುದಿಲ್ಲ ಎಂದು ಹೇಳಿದ್ದಾರೆ.

Advertisement
Tags :
LatetsNewsNewsKannadaಟಿಕೆಟ್‌ಬಿಜೆಪಿಸತ್ಯಜಿತ್ ಸುರತ್ಕಲ್ಸಮಾವೇಶ
Advertisement
Next Article