ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೊದಲ ಬಾರಿಗೆ 'ಮಿಸ್ ಯುನಿವರ್ಸ್‌'ನಲ್ಲಿ ಸೌದಿ ಅರೇಬಿಯಾದ ಯುವತಿ

ಸೌದಿ ಅರೇಬಿಯಾ ಸಂಪ್ರಾದಾಯಿಕ ಇಸ್ಲಾಮಿಕ್ ದೇಶ. ಇಲ್ಲಿ ಮಹಿಳೆಯರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಹಿಸಿದ ಉದಾಹರಣೆಗಳು ಇಲ್ಲ. ಈ ದೇಶದಲ್ಲಿ ಮಹಿಳೆಯ ಮೇಲೆ ನಿರ್ಬಂಧಗಳು ಹೆಚ್ಚಿದ್ದು, ಮಿಸ್ ಯೂನಿವರ್ಸ್ ಅಂತ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಆದ್ರೀಗ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ಅಧಿಕೃತವಾಗಿ ಭಾಗವಹಿಸಲಿದೆ.
10:15 PM Mar 26, 2024 IST | Ashitha S

ಸೌದಿ ಅರೇಬಿಯಾ ಸಂಪ್ರಾದಾಯಿಕ ಇಸ್ಲಾಮಿಕ್ ದೇಶ. ಇಲ್ಲಿ ಮಹಿಳೆಯರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಹಿಸಿದ ಉದಾಹರಣೆಗಳು ಇಲ್ಲ. ಈ ದೇಶದಲ್ಲಿ ಮಹಿಳೆಯ ಮೇಲೆ ನಿರ್ಬಂಧಗಳು ಹೆಚ್ಚಿದ್ದು, ಮಿಸ್ ಯೂನಿವರ್ಸ್ ಅಂತ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಆದ್ರೀಗ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ಅಧಿಕೃತವಾಗಿ ಭಾಗವಹಿಸಲಿದೆ.

Advertisement

ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಸೌದಿ ಅರೇಬಿಯಾದ ಅಧಿಕಾರ ವಹಿಸಿಕೊಂಡ ದಿನದಿಂದ ಈ ದೇಶ ಚಿಕ್ಕ ಪುಟ್ಟ ಬದಲಾವಣೆಗಳನ್ನು ಕಾಣುತ್ತಲೇ ಇದೆ. ಈ ದೃಷ್ಟಿಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ತನ್ನ ದೇಶದ ಯುವತಿಯನ್ನು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿ ಕೊಟ್ಟಿದೆ.

ಈ ಬಾರಿಯ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸುತ್ತಿರುವ ಮೊದಲ ಯುವತಿ ರೂಮಿ ಅಲ್ಕಹ್ತಾನಿ. 27 ವರ್ಷದ ರೂಮಿ ಅಲ್ಕಹ್ತಾನಿ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

Advertisement

"ಸೌದಿ ಅರೇಬಿಯಾದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ" ಎಂದು ರೂಮಿ ಅಲ್ಕಹ್ತಾನಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಹೌದು, ಸೌದಿ ಅರೇಬಿಯಾದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮೂಲದ ರೂಮಿ ಅಲ್ಕಹ್ತಾನಿ ಇತ್ತೀಚೆಗೆ ಮತ್ತೊಂದು ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆಲವು ವಾರಗಳ ಹಿಂದಷ್ಟೇ ಮಲೇಷ್ಯಾದಲ್ಲಿ ನಡೆದ ಮಿಸ್ ಅಂಡ್ ಮಿಸ್ಟರ್ ಗ್ಲೋಬಲ್ ಏಷಿಯನ್ ರೂಮಿ ಅಲ್ಕಹ್ತಾನಿ ಭಾಗವಹಿಸಿದ್ದರು.

Advertisement
Tags :
global eventindiaLatestNewsMexicoRumy Alqahtani
Advertisement
Next Article