For the best experience, open
https://m.newskannada.com
on your mobile browser.
Advertisement

ಸುಪ್ರೀಂಕೋರ್ಟ್​ ಆದೇಶದ ಬೆನ್ನಲ್ಲೇ ಎಚ್ಚೆತ್ತ ಎಸ್​ಬಿಐ ಬ್ಯಾಂಕ್​​!

ಸುಪ್ರೀಂಕೋರ್ಟ್​ ಆದೇಶದ ಬೆನ್ನಲ್ಲೇ ಎಚ್ಚೆತ್ತ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಎಲೆಕ್ಷನ್​ ಕಮಿಷನ್​ಗೆ ನೀಡಿದೆ ಎಂದು ತಿಳಿದು ಬಂದಿದೆ. ಇಂದು ಸಂಜೆ 5.30 ಗಂಟೆಗೆ ಎಸ್​​ಬಿಐ ಎಲ್ಲಾ ಮಾಹಿತಿ ನೀಡಿದ್ದು, ಎಲ್ಲಾ ಡೀಟೈಲ್ಸ್​​ ಚುನಾವಣಾ ಆಯೋಗದ ವೆಬ್​ಸೈಟಿನಲ್ಲಿ ಪ್ರಕಟವಾಗಲಿದೆ.
09:34 PM Mar 12, 2024 IST | Ashitha S
ಸುಪ್ರೀಂಕೋರ್ಟ್​ ಆದೇಶದ ಬೆನ್ನಲ್ಲೇ ಎಚ್ಚೆತ್ತ ಎಸ್​ಬಿಐ ಬ್ಯಾಂಕ್​​

ನವದೆಹಲಿ: ಸುಪ್ರೀಂಕೋರ್ಟ್​ ಆದೇಶದ ಬೆನ್ನಲ್ಲೇ ಎಚ್ಚೆತ್ತ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಎಲೆಕ್ಷನ್​ ಕಮಿಷನ್​ಗೆ ನೀಡಿದೆ ಎಂದು ತಿಳಿದು ಬಂದಿದೆ. ಇಂದು ಸಂಜೆ 5.30 ಗಂಟೆಗೆ ಎಸ್​​ಬಿಐ ಎಲ್ಲಾ ಮಾಹಿತಿ ನೀಡಿದ್ದು, ಎಲ್ಲಾ ಡೀಟೈಲ್ಸ್​​ ಚುನಾವಣಾ ಆಯೋಗದ ವೆಬ್​ಸೈಟಿನಲ್ಲಿ ಪ್ರಕಟವಾಗಲಿದೆ.

Advertisement

ಈ ಹಿಂದೆಯೇ ಸುಪ್ರೀಂಕೋರ್ಟ್‌ ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಗೆ ಚಾಟಿ ಬೀಸಿತ್ತು. ಇದರ ಬೆನ್ನಲ್ಲೇ ಮಾಹಿತಿ ನೀಡಲು 4 ತಿಂಗಳು ಎಂದರೆ ಜುಲೈವರೆಗೂ ಅವಕಾಶ ನೀಡಿ ಎಂದು ಮನವಿ ಮಾಡಿತ್ತು. ಇದಕ್ಕೆ ತಪರಾಕಿ ಬಾರಿಸಿದ್ದ ಸುಪ್ರೀಂಕೋರ್ಟ್​​ ಇಷ್ಟು ದಿನ ಕಾಲಾವಕಾಶ ಯಾಕೆ ಎಂದು ಪ್ರಶ್ನಿಸಿತ್ತು. ಮಾರ್ಚ್​​ 12ರ ಸಂಜೆ ಒಳಗೆ ಮಾಹಿತಿ ನೀಡಿ ಎಂದಿತ್ತು. ಸದ್ಯ ಇಂದು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಎಲೆಕ್ಷನ್​ ಕಮಿಷನ್​ಗೆ ನೀಡಿದೆ.

Advertisement
Advertisement
Tags :
Advertisement