For the best experience, open
https://m.newskannada.com
on your mobile browser.
Advertisement

ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡುವಂತೆ ಡಿ ರೂಪಾಗೆ ಸುಪ್ರೀಂಕೋರ್ಟ್ ಆದೇಶ

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್​ನ್ನು 24 ಗಂಟೆಯಲ್ಲಿ ಡಿಲೀಟ್ ಮಾಡುವಂತೆ ಡಿ.ರೂಪಾಗೆ ಸುಪ್ರೀಂಕೋರ್ಟ್ ಆದೇಶಿಸಿದೆ.
09:56 PM Dec 14, 2023 IST | Ramya Bolantoor
ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡುವಂತೆ ಡಿ ರೂಪಾಗೆ ಸುಪ್ರೀಂಕೋರ್ಟ್  ಆದೇಶ

ಬೆಂಗಳೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್​ನ್ನು 24 ಗಂಟೆಯಲ್ಲಿ ಡಿಲೀಟ್ ಮಾಡುವಂತೆ ಡಿ.ರೂಪಾಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

Advertisement

ಎಲ್ಲಾ ಪೋಸ್ಟ್‌ ಅಳಿಸುವುದು ಅಸಾಧ್ಯವಾದರೆ, ಎಲ್ಲಾ ಕಾಮೆಂಟ್‌ಗಳನ್ನು, ಹೇಳಿಕೆ‌ ಹಿಂಪಡೆದಿದ್ದೇನೆ ಎಂಬ ಕನಿಷ್ಠ ಪೋಸ್ಟ್ ಹಾಕಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ.

ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಪೀಠದಿಂದ ಮೌಖಿಕ ನಿರ್ದೇಶನ ನೀಡಿದ್ದಾರೆ. ಪೋಸ್ಟ್ ಡಿಲೀಟ್ ಮಾಡಿದರ ಬಗ್ಗೆ ನಾಳೆಯೇ ಡಿ.ರೂಪಾ ಅಫಿಡವಿಟ್ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Advertisement

2023ರ ಫೆಬ್ರುವರಿ 14 ಹಾಗೂ 16 ರಂದು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದರಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತನ್ನ ವ್ಯಕ್ತಿತ್ವಕ್ಕೆ ರೂಪಾ ಧಕ್ಕೆ ತಂದಿದ್ದಾರೆ ಎಂದು ನ್ಯಾಯಾಲಯದಲ್ಲಿ ಧಾವೆ ಹೂಡಿದ್ದರು. ಸಿಂಧೂರಿ ದಾಖಲಿಸಿರುವ ದೂರು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಡಿ.ರೂಪಾ ಅರ್ಜಿ ಸಲ್ಲಿಸಿದ್ದರು.

ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸುಪ್ರೀಂ ಸೂಚಿಸಿತ್ತು. ಹಾಗಾಗಿ ಇಬ್ಬರೂ ಇಂದು ಸುಪ್ರೀಂಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. ಮಧ್ಯಸ್ಥಿಕೆ ವಿಫಲವಾಗಿದೆ ಎಂದು ಇಂದು ಕೋರ್ಟ್‌ಗೆ ತಿಳಿಸಲಾಗಿದೆ.

Advertisement
Tags :
Advertisement