For the best experience, open
https://m.newskannada.com
on your mobile browser.
Advertisement

ನಟಿ ಜಯಪ್ರದಾಗೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್

ನೌಕರರ ರಾಜ್ಯ ವಿಮಾ ನಿಗಮಕ್ಕೆ (ಇಎಸ್‌ಐಸಿ) (ಜಯಪ್ರದಾ ಸಿನಿ ಥಿಯೇಟರ್ ವರ್ಸಸ್ ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೊರೇಷನ್) ವಂತಿಗೆ ಪಾವತಿಸಲು ವಿಫಲವಾದ ಕಾರಣ ನಟಿ ಜಯಪ್ರದಾ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಅವರ ಶಿಕ್ಷೆಯನ್ನು ರದ್ದುಗೊಳಿಸಿ ಬಿಗ್ ರಿಲೀಫ್ ನೀಡಿದೆ.
11:55 AM Mar 18, 2024 IST | Ashitha S
ನಟಿ ಜಯಪ್ರದಾಗೆ ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್

ದೆಹಲಿ: ನೌಕರರ ರಾಜ್ಯ ವಿಮಾ ನಿಗಮಕ್ಕೆ (ಇಎಸ್‌ಐಸಿ) (ಜಯಪ್ರದಾ ಸಿನಿ ಥಿಯೇಟರ್ ವರ್ಸಸ್ ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೊರೇಷನ್) ವಂತಿಗೆ ಪಾವತಿಸಲು ವಿಫಲವಾದ ಕಾರಣ ನಟಿ ಜಯಪ್ರದಾ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಅವರ ಶಿಕ್ಷೆಯನ್ನು ರದ್ದುಗೊಳಿಸಿ ಬಿಗ್ ರಿಲೀಫ್ ನೀಡಿದೆ.

Advertisement

ಕಾರ್ಮಿಕರಿಂದ ಸಂಗ್ರಹಿಸಿದ ಇಎಸ್‌ಐ ಮೊತ್ತವನ್ನು ನೌಕರರ ರಾಜ್ಯ ವಿಮಾ ನಿಗಮಕ್ಕೆ ಸರಿಯಾಗಿ ಪಾವತಿಸಿದ ಹಿನ್ನೆಲೆ ನಟಿ ಜಯಪ್ರದಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ನಟಿ ಜಯಪ್ರಯಾ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ನ್ಯಾಯಪೀಠವು ಅವರಿಗೆ ಮಧ್ಯಂತರ ಜಾಮೀನು ನೀಡಿದ್ದು, “ಮೇಲ್ಮನವಿದಾರರು (ಜಯಪ್ರದಾ ಮತ್ತು ಅವರು ಪಾಲನ್ನು ಹೊಂದಿರುವ ಚಿತ್ರಮಂದಿರ) 9,80,000 ರೂ.ಗಳನ್ನು ಠೇವಣಿ ಇಟ್ಟಿದ್ದಾರೆ.

Advertisement

ಶಿಕ್ಷೆಯ ಆದೇಶಗಳ ವಿರುದ್ಧ ಗಣನೀಯ ಮೇಲ್ಮನವಿಗಳು ಬಾಕಿ ಉಳಿದಿವೆ ಎಂಬ ಅಂಶವನ್ನು ಪರಿಗಣಿಸಿ, ಎರಡನೇ ಮೇಲ್ಮನವಿದಾರ (ಜಯಪ್ರದಾ) ಮೇಲ್ಮನವಿಗಳ ವಿಲೇವಾರಿಯವರೆಗೆ ಶಿಕ್ಷೆಯ ಅಮಾನತು ಮತ್ತು ಜಾಮೀನಿನ ಬಿಡುಗಡೆಗೆ ಅರ್ಹರಾಗಿದ್ದಾರೆ ” ಎಂದು ನ್ಯಾಯಪೀಠ ತನ್ನ ಮಾರ್ಚ್ 15 ರ ಆದೇಶದಲ್ಲಿ ತಿಳಿಸಿದೆ.

Advertisement
Tags :
Advertisement