For the best experience, open
https://m.newskannada.com
on your mobile browser.
Advertisement

ನಾಳೆಯಿಂದ 5 ದಿನ ಶಾಲಾ ಮಕ್ಕಳಿಗೆ ರಜೆ ಘೋಷಣೆ !

ಹಲವಾರು ದಿನಗಳಿಂದ ಇದ್ದಕ್ಕಿದ್ದಂತೆ ಚಳಿರಾಯನ ಆರ್ಭಟ ಜೋರಾಗಿದ್ದು, ಜನರನ್ನು ಹೈರಾಣಾಗಿಸಿದೆ.  ಪರಿಣಾಮ ಮಕ್ಕಳಿಗೆ ಶೀತ ಜ್ವರ, ಕೆಮ್ಮು ಕಾಣಿಸುತ್ತಿದ್ದು, ಆಸ್ಪತ್ರೆಗೆ ತೆರಳುವಂತಾಗಿದೆ. ಚಳಿಯಿಂದ ವಯೋ ವೃದ್ಧರೆಲ್ಲ ಮಮ್ಮಲ ಮರಗುವಂತಾಗಿದೆ.ದಿನೇ ದಿನೆ ಹೆಚ್ಚಾಗುತ್ತಿರುವ ಚಳಿಗೆ ತಡೆದುಕೊಳ್ಳಲು ಸಾರ್ವಜನಿಕರು ವಿವಿಧ ಉಣ್ಣೆ ಉಡುಪುಗಳನ್ನು ಖರೀದಿಸುತ್ತಿರುವುದು ಕಂಡು ಬರುತ್ತಿದೆ. ಎಲ್ಲೆಂದರಲ್ಲಿ ಜರ್ಕಿನ್‌ಗಳು, ಸ್ವೇಟರ್‌ಗಳು ಮಾರಾಟಕ್ಕೆ ಲಭ್ಯವಾಗಿವೆ. ರಸ್ತೆ ಬದಿಯಲ್ಲಿಯೂ ಮಾರಾಟಕ್ಕಿವೆ
10:06 PM Jan 07, 2024 IST | Ashitha S
ನಾಳೆಯಿಂದ 5 ದಿನ ಶಾಲಾ ಮಕ್ಕಳಿಗೆ ರಜೆ ಘೋಷಣೆ

ನವದೆಹಲಿ: ಹಲವಾರು ದಿನಗಳಿಂದ ಇದ್ದಕ್ಕಿದ್ದಂತೆ ಚಳಿರಾಯನ ಆರ್ಭಟ ಜೋರಾಗಿದ್ದು, ಜನರನ್ನು ಹೈರಾಣಾಗಿಸಿದೆ.  ಪರಿಣಾಮ ಮಕ್ಕಳಿಗೆ ಶೀತ ಜ್ವರ, ಕೆಮ್ಮು ಕಾಣಿಸುತ್ತಿದ್ದು, ಆಸ್ಪತ್ರೆಗೆ ತೆರಳುವಂತಾಗಿದೆ. ಚಳಿಯಿಂದ ವಯೋ ವೃದ್ಧರೆಲ್ಲ ಮಮ್ಮಲ ಮರಗುವಂತಾಗಿದೆ.ದಿನೇ ದಿನೆ ಹೆಚ್ಚಾಗುತ್ತಿರುವ ಚಳಿಗೆ ತಡೆದುಕೊಳ್ಳಲು ಸಾರ್ವಜನಿಕರು ವಿವಿಧ ಉಣ್ಣೆ ಉಡುಪುಗಳನ್ನು ಖರೀದಿಸುತ್ತಿರುವುದು ಕಂಡು ಬರುತ್ತಿದೆ. ಎಲ್ಲೆಂದರಲ್ಲಿ ಜರ್ಕಿನ್‌ಗಳು, ಸ್ವೇಟರ್‌ಗಳು ಮಾರಾಟಕ್ಕೆ ಲಭ್ಯವಾಗಿವೆ. ರಸ್ತೆ ಬದಿಯಲ್ಲಿಯೂ ಮಾರಾಟಕ್ಕಿವೆ

Advertisement

ಇನ್ನು ರಾಷ್ಟ್ರಧಾನಿ ದೆಹಲಿಯಲ್ಲಿ ಅತಿಯಾದ ಚಳಿ ಹಿನ್ನೆಲೆಯಲ್ಲಿ 5 ದಿನಗಳ ಕಾಲ ನರ್ಸರಿಯಿಂದ 5 ತರಗತಿವರೆಗಿನ ಮಕ್ಕಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಶಿಕ್ಷಣ ಸಚಿವೆ ಅತಿಶಿ ಅವರು, ದೆಹಲಿಯಲ್ಲಿ ಅತಿಯಾದ ಚಳಿ ಇರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜನವರಿ​ 12ರವರೆಗೆ ನರ್ಸರಿಯಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದು ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

Advertisement

ಇನ್ನು ಜನವರಿ 13 ಎರಡನೇ ಶನಿವಾರ, 14 ಭಾನುವಾರ ಆಗಿದ್ದರಿಂದ ಈ 2 ದಿನ ರಜೆ ಇರಲಿದೆ. ಹೀಗಾಗಿ ಶಾಲೆಗಳು 15 ರಿಂದ ತರಗತಿ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. ಚಳಿಗಾಲ ಇರುವುದರಿಂದ ಯಾವುದೇ ಶಾಲೆಯನ್ನು ಬೆಳಗ್ಗೆ 8 ಗಂಟೆ ಮೊದಲೇ ಆರಂಭ ಮಾಡುವಂತಿಲ್ಲ. ಹಾಗೇ ಸಂಜೆ 5ರ ನಂತರ ಶಾಲೆಗಳನ್ನು ನಡೆಸುವಂತಿಲ್ಲ. ಶಾಲೆಗಳು ಬೇಕಾದರೆ ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಆಯೋಜಿಸಬಹುದು ಎಂದು ಸಚಿವೆ ಮಾಹಿತಿ ನೀಡಿದ್ದಾರೆ.

Advertisement
Tags :
Advertisement