ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

4 ವರ್ಷಗಳಲ್ಲಿ ಕರ್ನಾಟಕದಲ್ಲಿ 6,765 ಮಕ್ಕಳ ಅಸಹಜ ಸಾವು: ವರದಿ

ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2019 ರಿಂದ 2022ರ ವರೆಗೆ ಕರ್ನಾಟಕದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 6,765 ಮಕ್ಕಳು ಅಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದಿಂದ ನೀಡಿದ ವರದಿಯಲ್ಲಿ ಈ ಮಾಹಿತಿ ತಿಳಿದುಬಂದಿದೆ.
12:52 PM Dec 01, 2023 IST | Ashitha S

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2019 ರಿಂದ 2022ರ ವರೆಗೆ ಕರ್ನಾಟಕದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 6,765 ಮಕ್ಕಳು ಅಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದಿಂದ ನೀಡಿದ ವರದಿಯಲ್ಲಿ ಈ ಮಾಹಿತಿ ತಿಳಿದುಬಂದಿದೆ.

Advertisement

ತಾಯಿ-ಮಗುವಿನ ಸಾವು, ಕೃಷಿ ಹೊಂಡಗಳಿಗೆ ಬಿದ್ದು ಸಾವು, ಆತ್ಮಹತ್ಯೆ ಸೇರಿದಂತೆ ರಾಜ್ಯದಲ್ಲಿ ಮಕ್ಕಳ ಅಸಹಜ ಸಾವುಗಳ ಕುರಿತು ಒಡನಾಡಿ ಸಂಸ್ಥೆಯು ಜಿಲ್ಲಾವಾರು ಮಾಹಿತಿಯನ್ನು ಕೇಳಿದೆ. 2019ರಲ್ಲಿ 1,574 ಮತ್ತು 2020 ರಲ್ಲಿ 1,534 ಮಕ್ಕಳು ಅಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಈ ಸಂಖ್ಯೆ 2021 ರಲ್ಲಿ 1,728 ಕ್ಕೆ ಏರಿತು. 2022 ರಲ್ಲಿ 1,929 ಕ್ಕೆ ಏರಿದೆ.

ಬೆಂಗಳೂರು ನಗರದಲ್ಲಿ ನಾಲ್ಕು ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 1,103 ಮಕ್ಕಳ ಅಸಹಜ ಸಾವುಗಳ ಪ್ರಕರಣಗಳು ದಾಖಲಿಸಿವೆ. 2019 ರಲ್ಲಿ 296 ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ 250 ಪ್ರಕರಣಗಳು ದಾಖಲಾಗಿವೆ. 2021 ರಲ್ಲಿ 269 ಮತ್ತು 2022 ರಲ್ಲಿ 288 ಪ್ರಕರಣಗಳು ದಾಖಲಾಗಿವೆ.

Advertisement

ಕರ್ನಾಟಕದ ರೈಲ್ವೇ ಪೊಲೀಸ್ ಠಾಣೆಗಳು ನಾಲ್ಕು ವರ್ಷಗಳಲ್ಲಿ ಮಕ್ಕಳ ಅಸಹಜ ಸಾವಿನ 406 ಪ್ರಕರಣಗಳನ್ನು ವರದಿ ಮಾಡಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಕೆಎಸ್‌ಸಿಪಿಸಿಆರ್) ಮಾಜಿ ಸದಸ್ಯರೂ ಆಗಿರುವ, ಲೈಂಗಿಕವಾಗಿ ಶೋಷಿತ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಯಲ್ಲಿ ತೊಡಗಿರುವ ಎನ್‌ಜಿಒ ಒಡನಾಡಿ ಸೇವಾ ಸಂಸ್ಥೆಯ ಸಹ-ಸಂಸ್ಥಾಪಕ ಎಂ.ಎಲ್ ಪರಶುರಾಮ್, ಕುಟುಂಬಗಳ ಆತ್ಮಹತ್ಯೆ, ಮೊಬೈಲ್ ಫೋನ್, ಶಿಕ್ಷಣದ ಪ್ರವೇಶಕ್ಕೆ ನಿರಾಕರಣೆ ಅಥವಾ ಉತ್ತಮ ಆಹಾರವನ್ನು ನಿರಾಕರಿಸಿದಾಗ ಮಕ್ಕಳು ತಮ್ಮ ಜೀವನವನ್ನು ಕೊನೆಗೊಳಿಸಿರಬಹುದು. ಅಲ್ಲದೆ ಶಿಕ್ಷಣವನ್ನು ನಿರಾಕರಿಸಿ ಬಾಲ್ಯವಿವಾಹಕ್ಕೆ ಒತ್ತಾಯಿಸಿದಾಗ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ತಮ್ಮ ಕುಟುಂಬ ಸದಸ್ಯರು ತಮ್ಮ ಜಾತಿಗೆ ಅಥವಾ ಸಮುದಾಯಕ್ಕೆ ಸೇರದ ಸಂಗಾತಿಯೊಂದಿಗಿನ ಪ್ರೀತಿಸುವುದನ್ನು ವಿರೋಧಿಸಿದಾಗ ಮಕ್ಕಳು ಸಹ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಾರೆ ಎಂದಿದ್ದಾರೆ.

 

 

 

Advertisement
Tags :
GOVERNMENTindiaKARNATAKALatestNewsNewsKannadaಕರ್ನಾಟಕನವದೆಹಲಿಬೆಂಗಳೂರುಮಕ್ಕಳ ಸಾವು
Advertisement
Next Article