For the best experience, open
https://m.newskannada.com
on your mobile browser.
Advertisement

ಭೂಮಿಯಲ್ಲೇ ನನ್ನಷ್ಟು ಅದೃಷ್ಟವಂತ ಯಾರೂ ಇಲ್ಲ ಎಂದ ಅರುಣ್ ಯೋಗಿರಾಜ್

ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಶುಭ ಮುಹೂರ್ತದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ದೈವಿಕನಗರಿಯಲ್ಲಿ ರಾಮನಾಮದ ಜಪ ಮುಗಿಲು ಮುಟ್ಟಿದ್ದು, ರಾಮಭಕ್ತರು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡಿದ್ದಾರೆ.
02:32 PM Jan 22, 2024 IST | Ashitha S
ಭೂಮಿಯಲ್ಲೇ ನನ್ನಷ್ಟು ಅದೃಷ್ಟವಂತ ಯಾರೂ ಇಲ್ಲ ಎಂದ ಅರುಣ್ ಯೋಗಿರಾಜ್

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಶುಭ ಮುಹೂರ್ತದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ದೈವಿಕನಗರಿಯಲ್ಲಿ ರಾಮನಾಮದ ಜಪ ಮುಗಿಲು ಮುಟ್ಟಿದ್ದು, ರಾಮಭಕ್ತರು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡಿದ್ದಾರೆ.

Advertisement

ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಕೋಟ್ಯಾನುಕೋಟಿ ರಾಮಭಕ್ತರಿಗೆ ಇಂದು ರಾಮಲಲ್ಲಾ ಮೂರ್ತಿಯ ದರ್ಶನವಾಗುತ್ತಿದೆ. ಈ ಸಂದರ್ಭದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಭೂಮಿಯಲ್ಲೇ ನನ್ನಷ್ಟು ಅದೃಷ್ಟವಂತ ಬೇರೆ ಯಾರೂ ಇಲ್ಲ. ನನ್ನ ಪೂರ್ವಜರು ಮತ್ತು ಕುಟುಂಬ ಸದಸ್ಯರ ಆಶೀರ್ವಾದ ನನ್ನ ಮೇಲಿದೆ. ರಾಮಲಲ್ಲಾನ ಆಶೀರ್ವಾದದಿಂದ ಇದೆಲ್ಲಾ ಸಾಧ್ಯವಾಗಿದೆ. ನನಗೆ ಅನ್ನಿಸುತ್ತದೆ ನಾನು ಡ್ರೀಮ್ ಬಾಯ್ ಎಂದು ರಾಮಲಲ್ಲಾ ಮೂರ್ತಿ ಕೆತ್ತನೆಯ ಶಿಲ್ಪಿ ಅರುಣ್ ಯೋಗಿರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Advertisement
Tags :
Advertisement