ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂದಿನಿಂದ ಭಾರಿ ವಾಹನಗಳಲ್ಲಿ ಸೀಟ್​ಬೆಲ್ಟ್​, ಕ್ಯಾಮೆರಾ ಕಡ್ಡಾಯ

ಇಂದಿನಿಂದ ಕೇರಳದಲ್ಲಿ ಎಲ್ಲಾ ಭಾರಿ ವಾಹನಗಳಿಗೆ ಸೀಟ್‌ ಬೆಲ್ಟ್‌ ಹಾಗು ಕ್ಯಾಮೆರಾ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
12:16 PM Nov 01, 2023 IST | Ramya Bolantoor

ಕೇರಳ: ಇಂದಿನಿಂದ ಕೇರಳದಲ್ಲಿ ಎಲ್ಲಾ ಭಾರಿ ವಾಹನಗಳಿಗೆ ಸೀಟ್‌ ಬೆಲ್ಟ್‌ ಹಾಗು ಕ್ಯಾಮೆರಾ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ರಸ್ತೆಯಲ್ಲಿ ಯಾವುದೇ ವಾಹನ ತಡೆದು ತಪಾಸಣೆ ನಡೆಸುವುದಿಲ್ಲ ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.

Advertisement

ನವೆಂಬರ್ 1ರಿಂದ ಫಿಟ್ನೆಸ್ ಸರ್ಟಿಫಿಕೇಟ್ ಬೇಕಾದರೆ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಬೇಕು ಎಂದು ಈ ಹಿಂದೆಯೇ ಸ್ಪಷ್ಟಪಡಿಸಲಾಗಿತ್ತು. ಈ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಸಚಿವರು ಹೇಳಿದರು.

ಸೀಟ್ ಬೆಲ್ಟ್ ಮತ್ತು ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಿದ್ದರೆ ಮಾತ್ರ ಭಾರೀ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡುವುದಾಗಿ ಕೇರಳ ಸಾರಿಗೆ ಇಲಾಖೆ ತಿಳಿಸಿದೆ. ಹಾಗಾಗಿ ಇಂದಿನಿಂದ ಲಾರಿ, ಬಸ್ ಸೇರಿದಂತೆ ಭಾರೀ ವಾಹನಗಳ ಚಾಲಕರಿಗೆ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ.

Advertisement

Advertisement
Tags :
camerKeralakeralagovernmentLatestNewsLatetsNewsNewsKannadaSeatbeltsvehicles
Advertisement
Next Article