ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾಂಗ್ರೇಸ್‌ ಎರಡನೇ ಪಟ್ಟಿಗೆ ಘೋಷಣೆಯೊಂದೇ ಬಾಕಿ : ಯಾರಿಗೆಲ್ಲ ಟಿಕೆಟ್? ಇಲ್ಲಿದೆ ವಿವರ

ಲೋಕಸಭಾ ಚುನಾವಣ ಹಿನ್ನೆಲೆ ಕಾಂಗ್ರಸ್‌ ಪಕ್ಷದ ಕರ್ನಾಟಕದ ಅಭ್ಯರ್ಥಿಗಳ ಮೊದಲನೇ ಪಟ್ಟಿ ಈಗಾಗಲೇ ಬಿಡುಗಡೆ ಆಗಿದೆ ಹಾಗೂ ಕಾಂಗ್ರೆಸ್‌ನ ಎರಡನೇ ಪಟ್ಟಿ ಕೂಡ ಅಂತಿಮ ಹಂತಕ್ಕೆ ತಲುಪಿದ್ದು ಘೋಷಣೆಯಷ್ಟೆ ಬಾಕಿ ಉಳಿದಿದೆ. ರಾಜ್ಯದ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಹಾಗೂ ಬೆಂಬಲಿಗರು ಕುತೂಹಲದಿಂದ ಕಾಯುತ್ತಿದ್ದ ದಿನಕ್ಕೆ ಕೆಲವೇ ಘಂಟೆಗಳು ಬಾಕಿ ಇದೆ.
07:21 AM Mar 21, 2024 IST | Nisarga K
ಕಾಂಗ್ರೇಸ್‌ ಎರಡನೇ ಪಟ್ಟಿಗೆ ಘೋಷಣೆಯೊಂದೇ ಬಾಕಿ : ಯಾರಿಗೆಲ್ಲ ಟಿಕೆಟ್? ಇಲ್ಲಿದೆ ವಿವರ

ಬೆಂಗಳೂರು: ಲೋಕಸಭಾ ಚುನಾವಣ ಹಿನ್ನೆಲೆ ಕಾಂಗ್ರಸ್‌ ಪಕ್ಷದ ಕರ್ನಾಟಕದ ಅಭ್ಯರ್ಥಿಗಳ ಮೊದಲನೇ ಪಟ್ಟಿ ಈಗಾಗಲೇ ಬಿಡುಗಡೆ ಆಗಿದೆ ಇದೀಗ ಕಾಂಗ್ರೆಸ್‌ನ ಎರಡನೇ ಪಟ್ಟಿ ಕೂಡ ಅಂತಿಮ ಹಂತಕ್ಕೆ ತಲುಪಿದ್ದು ಘೋಷಣೆಯಷ್ಟೆ ಬಾಕಿ ಉಳಿದಿದೆ. ರಾಜ್ಯದ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಹಾಗೂ ಬೆಂಬಲಿಗರು ಕುತೂಹಲದಿಂದ ಕಾಯುತ್ತಿದ್ದ ದಿನಕ್ಕೆ ಕೆಲವೇ ಘಂಟೆಗಳು ಬಾಕಿ ಇದೆ.ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಿಇಸಿ ಸಭೆ ಬಳಿಕ ಕಾಂಗ್ರೆಸ್‌ ಅಭ್ಯರ್ತಿಗಳ ಪಟ್ಟಿ ಅಂತಿಮ ಗೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

Advertisement

ಎರಡನೇ ಪಟ್ಟಿ: ಸಂಭಾವ್ಯ ಅಭ್ಯರ್ಥಿಗಳು
ಚಿತ್ರದುರ್ಗ – ಚಂದ್ರಪ್ಪ
ರಾಯಚೂರು – ಕುಮಾರ ನಾಯ್ಕ್
ಬೆಳಗಾವಿ -ಮೃಣಾಲ್ ಹೆಬ್ಬಾಳ್ಕರ್
ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
ಬಾಗಲಕೋಟೆ – ಸಂಯುಕ್ತ ಶಿವಾನಂದ ಪಾಟೀಲ್
ಧಾರವಾಡ – ವಿನೋದ್ ಅಸೂಟಿ
ಕೊಪ್ಪಳ – ರಾಜಶೇಖರ ಹಿಟ್ನಾಳ್
ಕಲಬುರಗಿ – ರಾಧಾಕೃಷ್ಣ ದೊಡ್ಮನಿ
ಬೀದರ್ – ಸಾಗರ್ ಖಂಡ್ರೆ
ದಕ್ಷಿಣ ಕನ್ನಡ – ಪದ್ಮರಾಜ್
ಮೈಸೂರು – ಎಂ.ಲಕ್ಷ್ಮಣ
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಬೆಂಗಳೂರು ಕೇಂದ್ರ -ಮನ್ಸೂರ್ ಅಲಿ ಖಾನ್
ಬೆಂಗಳೂರು ಉತ್ತರ – ಪ್ರೊ.ರಾಜೀವ್ ಗೌಡ
ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್
ಇನ್ನು ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿ ಈ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಗ್ಗಂಟಾಗಿದೆ.
ಈ ಕರಿತು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು, ಇದೀಗ ನಾಲ್ಕು 4 ಕ್ಷೇತ್ರ ಬಾಕಿ ಉಳಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.ಬೇರೆ ಪಕ್ಷದ ನಾಯಕರು ಕಾಂಗ್ರೆಸ್​ಗೆ ಬರುವ ಬಗ್ಗೆ ಬಹಿರಂಗವಾಗಿ ಮಾತನಾಡಲ್ಲ, ಕೆಲವು ಸಂಸದರ ಕಾಂಗ್ರೆಸ್ ಸೇರ್ಪಡೆ ವಿಚಾರ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

Advertisement
Advertisement
Tags :
CANDIDATECongressLatestNewslistlokasabha electionNewsKarnatakaPOLITICS
Advertisement
Next Article