For the best experience, open
https://m.newskannada.com
on your mobile browser.
Advertisement

ಯಾವೆಲ್ಲ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ಇದೆ ನೋಡಿ

ನೆರೆಯ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಆದರೆ ಇಂದು ಮತ್ತು ನಾಳೆ ರಾಜ್ಯಕ್ಕೆ ಮಳೆರಾಯ ಬಿಡುವು ಕೊಟ್ಟಿದ್ದು, ರಾಜ್ಯದಾದ್ಯಂತ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
07:00 AM Dec 07, 2023 IST | Ashika S
ಯಾವೆಲ್ಲ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ಇದೆ ನೋಡಿ

ಬೆಂಗಳೂರು: ನೆರೆಯ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಆದರೆ ಇಂದು ಮತ್ತು ನಾಳೆ ರಾಜ್ಯಕ್ಕೆ ಮಳೆರಾಯ ಬಿಡುವು ಕೊಟ್ಟಿದ್ದು, ರಾಜ್ಯದಾದ್ಯಂತ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಆದರೆ ಡಿಸೆಂಬರ್ 9 ರಂದು ದಕ್ಷಿಣ ಒಳನಾಡಿಗೆ, ಡಿಸೆಂಬರ್‌ 10-11 ಭಾನುವಾರ ಸೋಮವಾರದಂದು ಕರಾವಳಿ ಜಿಲ್ಲೆಗಳಿಗೆ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ಇದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ ಹಾಗೂ ಗದಗ, ಬಳ್ಳಾರಿ, ಬೆಂಗಳೂರು ನಗರ, ಗ್ರಾಮಾಂತರ:, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಕೊಡಗು, ಕೋಲಾರ, ಮಂಡ್ಯ, ದಾವಣಗೆರೆ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಹಾಗೂ ವಿಜಯನಗರ ಜಿಲ್ಲೆಯ ಕೆಲವು ಭಾಗಗಳಿಗೆ 25 ರಿಂದ 50% ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಮುಂದಿನ 48 ಘಂಟೆಗಳು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

Advertisement
Tags :
Advertisement