For the best experience, open
https://m.newskannada.com
on your mobile browser.
Advertisement

1 ಕೋಟಿ ಮೌಲ್ಯದ ವಿದೇಶಿ ಚಾಕೋಲೆಟ್ ಜಪ್ತಿ : ವ್ಯಾಪಾರಿ ಅರೆಸ್ಟ್‌

ಅಕ್ರಮವಾಗಿ ವಿದೇಶದಿಂದ ಚಾಕೋಲೆಟ್‌ ಹಾಗೂ ಬಿಸ್ಕತ್ ಸೇರಿದಂತೆ ಇತರೆ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
08:42 AM Jul 11, 2024 IST | Nisarga K
1 ಕೋಟಿ ಮೌಲ್ಯದ ವಿದೇಶಿ ಚಾಕೋಲೆಟ್ ಜಪ್ತಿ   ವ್ಯಾಪಾರಿ ಅರೆಸ್ಟ್‌
1 ಕೋಟಿ ಮೌಲ್ಯದ ವಿದೇಶಿ ಚಾಕೋಲೆಟ್ ಜಪ್ತಿ : ವ್ಯಾಪಾರಿ ಅರೆಸ್ಟ್‌

ಬೆಂಗಳೂರು: ಅಕ್ರಮವಾಗಿ ವಿದೇಶದಿಂದ ಚಾಕೋಲೆಟ್‌ ಹಾಗೂ ಬಿಸ್ಕತ್ ಸೇರಿದಂತೆ ಇತರೆ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನರೇಂದ್ರ ಸಿಂಗ್ ಬಂಧಿತನಾಗಿದ್ದು, ಆರೋಪಿಯಿಂದ ಚಾಕೋಲೆಟ್‌, ಬಿಸ್ಕತ್‌ ಹಾಗೂ ತಂಪು ತಂಪು ಪಾನೀಯ ಸೇರಿದಂತೆ ₹1 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Advertisement

ನರೇಂದ್ರ ಸಿಂಗ್ ರಾಜಸ್ಥಾನ ಮೂಲದವನಾಗಿದ್ದು ಕುಟುಂಬದ ಜತೆ ಸುಧಾಮನಗರದಲ್ಲಿ ನೆಲೆಸಿದ್ದ. ಕಳೆದ ಐದಾರು ವರ್ಷಗಳಿಂದ ಆರೋಪಿ ವಿದೇಶದಿಂದ ಕಳ್ಳ ಸಾಗಾಣಿಕೆ ಮೂಲಕ ಚಾಕೋಲೆಟ್, ಬಿಸ್ಕತ್ ಹಾಗೂ ತಂಪು ಪಾನೀಯ ಸೇರಿ ಇನ್ನಿತರ ಆಹಾರ ಪದಾರ್ಥಗಳನ್ನ ತರಿಸಿಕೊಳ್ಳುತ್ತಿದ್ದ. ವಿದೇಶದಿಂದ ಹಡಗಿನ ಮೂಲಕ ಮುಂಬೈ ಬಂದರಿಗೆ ಆಹಾರ ವಸ್ತುಗಳನ್ನು ತಂದು ಅಲ್ಲಿಂದ ಬೆಂಗಳೂರಿಗೆ ನರೇಂದ್ರ ತರುತ್ತಿದ್ದ. ನಗರದಲ್ಲಿ ದುಬಾರಿ ಬೆಲೆಗೆ ಅವುಗಳನ್ನು ಮಾರಾಟ ಮಾಡಿ ಲಕ್ಷಾಂತರ ರುಪಾಯಿ ಹಣ ಸಂಪಾದಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement
Tags :
Advertisement