ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿದೇಶಗಳಿಗೆ ಕೆ.ಎಂ.ಎಫ್ ಉತ್ಪನ್ನಗಳ ರವಾನೆ ಹೆಮ್ಮೆಯ ವಿಷಯ: ಶಾಸಕ ಯಶ್ ಪಾಲ್ ಸುವರ್ಣ

ರಾಜ್ಯ, ಹೊರ ರಾಜ್ಯಗಳ ಜತೆಗೆ ದೇಶ, ವಿದೇಶಗಳಲ್ಲೂ ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ. ಕೆಎಂಎಫ್‌ನ ಈ ಮಟ್ಟದ ಏಳಿಗೆಗೆ ಇಲ್ಲಿನ ರೈತರ ಪ್ರಾಮಾಣಿಕತೆ, ಆಡಳಿತ ಮಂಡಳಿಯ ಪರಿಶ್ರಮವೇ ಕಾರಣ ಎಂದು ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಹೇಳಿದರು.
04:23 PM Jan 22, 2024 IST | Ashika S

ಉಡುಪಿ: ರಾಜ್ಯ, ಹೊರ ರಾಜ್ಯಗಳ ಜತೆಗೆ ದೇಶ, ವಿದೇಶಗಳಲ್ಲೂ ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ. ಕೆಎಂಎಫ್‌ನ ಈ ಮಟ್ಟದ ಏಳಿಗೆಗೆ ಇಲ್ಲಿನ ರೈತರ ಪ್ರಾಮಾಣಿಕತೆ, ಆಡಳಿತ ಮಂಡಳಿಯ ಪರಿಶ್ರಮವೇ ಕಾರಣ ಎಂದು ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಹೇಳಿದರು.

Advertisement

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಉಡುಪಿ ಉಪ್ಪೂರು ಡೈರಿ ಆವರಣದಲ್ಲಿ ನಡೆದ ಉಡುಪಿ ಡೈರಿ  ಆಡಳಿತ ಕಚೇರಿ ಶಂಕುಸ್ಥಾಪನೆ ಹಾಗೂ ನೂತನ ಉಪಾಹಾರ ಗೃಹದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಕೆಎಂಎಫ್ ಶೇ. 85 ರಷ್ಟು ಆದಾಯವನ್ನು ರೈತರು, ಸೊಸೈಟಿ ರೈತರ ಹಿತಾಸಕ್ತಿಗೆ ಬಳಸಿಕೊಳ್ಳುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಣಿಪಾಲದಲ್ಲಿ ಇರುವ ಕೆಎಂಎಫ್‌ನ 2 ಎಕರೆ ವಿಶಾಲ ಜಾಗದಲ್ಲಿ ಹಾಲಿನ ಐಸ್‌ಕ್ರೀಮ್ ಸಹಿತ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಿರುವುದರಿಂದ ಸ್ಥಳೀಯ ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಿಗುವ ಗರಿಷ್ಠ ಪ್ರಮಾಣದ ಸಹಾಯಧನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

Advertisement

ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಂಗಳೂರು ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಪ್ಪೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಕಾರಿ ಡಾ.ಕೆ. ವಿದ್ಯಾಕುಮಾರಿ ಶುಭ ಹಾರೈಸಿದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ಕೆ. ರವಿರಾಜ ಹೆಗ್ಡೆ, ಕಾಪು ದಿವಾಕರ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ಸಾಣೂರು ನರಸಿಂಹ ನಾಯಕ್, ಬಿ. ಸುಧಾಕರ ರೈ, ಸುಧಾಕರ ಶೆಟ್ಟಿ, ಸವಿತಾ ಎನ್. ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ ಬಿ. ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಉಪನಿದೇಶಕ ಡಾ. ಅರುಣ ಕುಮಾರ್ ಶೆಟ್ಟಿ ಎನ್. ಉಪಸ್ಥಿತರಿದ್ದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಂಎಫ್ ಮಾರುಕಟ್ಟೆ ಉಪವ್ಯವಸ್ಥಾಪಕ ಸುಧಾಕರ , ವಿಸ್ತರಣಾಧಿಕಾರಿ ರಾಜಾರಾಮ್ ಕಾರ‍್ಯಕ್ರಮ ನಿರೂಪಿಸಿದರು.

Advertisement
Tags :
LatetsNewsNewsKannadaಉಡುಪಿಕೆಎಂಎಫ್ನಂದಿನಿ ಉತ್ಪನ್ನಪ್ರಾಮಾಣಿಕತೆಯಶಪಾಲ್ ಎ. ಸುವರ್ಣ
Advertisement
Next Article