For the best experience, open
https://m.newskannada.com
on your mobile browser.
Advertisement

ಬೆಂಗಳೂರಲ್ಲಿ ರಾಪಿಡೋದಲ್ಲೇ ಲೈಂಗಿಕ ದೌರ್ಜನ್ಯ: ವಿರೋಧಿಸಿದ್ದಕ್ಕೆ ಹೊರದಬ್ಬಿದ ಚಾಲಕ

ನಗರದಲ್ಲಿ ರಾಪಿಡೋ ಆಟೋ ರಿಕ್ಷಾ ಡ್ರೈವರ್‌ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ವಿರೋಧಿಸಿದಕ್ಕೆ ಆಟೋದಿಂದ ಹೊರ ಹಾಕಲ್ಪಟ್ಟ ದಾರುಣ ಘಟನೆ ನಡೆದಿದೆ. ಈ ಬಗ್ಗೆ ರಾಪಿಡೋ ಗಮನಕ್ಕೂ ತಂದರೂ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
05:06 PM Dec 01, 2023 IST | Ashitha S
ಬೆಂಗಳೂರಲ್ಲಿ ರಾಪಿಡೋದಲ್ಲೇ ಲೈಂಗಿಕ ದೌರ್ಜನ್ಯ  ವಿರೋಧಿಸಿದ್ದಕ್ಕೆ ಹೊರದಬ್ಬಿದ ಚಾಲಕ

ಬೆಂಗಳೂರು: ನಗರದಲ್ಲಿ ರಾಪಿಡೋ ಆಟೋ ರಿಕ್ಷಾ ಡ್ರೈವರ್‌ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ವಿರೋಧಿಸಿದಕ್ಕೆ ಆಟೋದಿಂದ ಹೊರ ಹಾಕಲ್ಪಟ್ಟ ದಾರುಣ ಘಟನೆ ನಡೆದಿದೆ. ಈ ಬಗ್ಗೆ ರಾಪಿಡೋ ಗಮನಕ್ಕೂ ತಂದರೂ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

Advertisement

ಈ ಸಂಬಂಧ ಅಂಕೂರ್​​ ಎಂಬುವರು ಟ್ವೀಟ್​ ಮಾಡಿದ್ದು, ಕೂಡಲೇ ಕಾಮುಕನನ್ನು ಬಂಧಿಸಿ ಎಂದು ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ.

ಕಳೆದ ರಾತ್ರಿ ನನ್ನ ಸ್ನೇಹಿತೆಯೊಂದಿಗೆ ರಾಪಿಡೋ ಆಟೋ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಸಿಕ್ಕ ಸಿಕ್ಕ ಕಡೆ ಕೆಟ್ಟದಾಗಿ ಮುಟ್ಟಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಆಟೋದಿಂದಲೇ ಹೊರಕ್ಕೆ ದೂಡಿದ್ದಾನೆ. ನಾವು ರಾಪಿಡೋ ಟೀಂಗೆ ಇದರ ಬಗ್ಗೆ ದೂರು ನೀಡಿದಾಗ ಇವ್ರು ಜಸ್ಟ್​ ಕ್ಷಮೆ ಕೇಳಿದ್ರು. ಈ ಕೂಡಲೇ ಪೊಲೀಸ್ರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ ಅಂಕೂರ್​​.

Advertisement

ಘಟನೆ ನಡೆದು ಒಂದು ದಿನದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

Advertisement
Tags :
Advertisement