For the best experience, open
https://m.newskannada.com
on your mobile browser.
Advertisement

ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ ಭಾರತ-ಪಾಕ್​​​​​ ಲೆಸ್ಬಿಯನ್ ಜೋಡಿ

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದ, ಭಾರತ- ಪಾಕ್ ಸಲಿಂಗಿಗಳಾದ ಅಂಜಲಿ ಚಕ್ರ ಮತ್ತು ಪಾಕಿಸ್ತಾನದ ಸೂಫಿ ಮಲಿಕ್ ಇದೀಗ ತಮ್ಮ ಸಲಿಂಗ ಸಂಬಂಧ ಅಥವಾ ಸಲಿಂಗ ವಿವಾಹಕ್ಕೆ ಅಂತ್ಯ ಹಾಡಿದ್ದಾರೆ.
02:12 PM Mar 26, 2024 IST | Ashitha S
ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ ಭಾರತ ಪಾಕ್​​​​​ ಲೆಸ್ಬಿಯನ್ ಜೋಡಿ

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದ, ಭಾರತ- ಪಾಕ್ ಸಲಿಂಗಿಗಳಾದ ಅಂಜಲಿ ಚಕ್ರ ಮತ್ತು ಪಾಕಿಸ್ತಾನದ ಸೂಫಿ ಮಲಿಕ್ ಇದೀಗ ತಮ್ಮ ಸಲಿಂಗ ಸಂಬಂಧ ಅಥವಾ ಸಲಿಂಗ ವಿವಾಹಕ್ಕೆ ಅಂತ್ಯ ಹಾಡಿದ್ದಾರೆ.

Advertisement

ಸಲಿಂಗ ಪ್ರೇಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಅಂಜಲಿ ಚಕ್ರ ಮತ್ತು ಸೂಫಿ ಮಲಿಕ್ ತಾವು ಸಂಬಂಧವನ್ನು ಮುರಿದುಕೊಂಡಿರುವ ಬಗ್ಗೆ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ನನಗೆ ಸೂಫಿ ಮಲಿಕ್​​​ನಿಂದ ದ್ರೋಹ ಆಗಿದೆ ಎಂದು ಅಂಜಲಿ ಚಕ್ರ ಹೇಳಿದ್ದಾರೆ.

ಅಂಜಲಿ ಮತ್ತು ಸೂಫಿ ಅವರ ಐದು ವರ್ಷಗಳಿಂದ ಸಂಬಂಧವನ್ನು ಹೊಂದಿದ್ದರು.

Advertisement

“ನಮ್ಮ ಮದುವೆಗೆ ಸ್ವಲ್ಪ ದಿನ ಇರುವಾಗಲೇ ಅಂಜಲಿಗೆ ಮೋಸ ಮಾಡುತ್ತಿದ್ದೇನೆ. ನಾನು ತಪ್ಪನ್ನು ಒಪ್ಪಿಕೊಳ್ಳುವೇ, ನಾನು ಅವಳನ್ನು ತುಂಬಾ ನೋಯಿಸಿದ್ದೇನೆ, ನನ್ನ ಜನರನ್ನು ನೋಯಿಸಿದ್ದೇನೆ. ನಮ್ಮ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ಅನೇಕರಿಗೆ ಈ ಕಾರಣದಿಂದ ನೋವು ನೀಡಿದ್ದೇನೆ. ನಾನು ಅವರನ್ನು ಪ್ರೀತಿಸುವೆ ಮತ್ತು ಅವರು ನನ್ನ ಬಗ್ಗೆ ಕಾಳಜಿ ಹೊಂದಿದ್ದಾರೆ. ನಾನು ಪ್ರೀತಿಸುವ ನಮ್ಮ ಸಮುದಾಯಕ್ಕೂ ನೋವು ನೀಡಿದ್ದೇನೆ ಎಂದು ಇನ್ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

ಇದು ಆಘಾತ ಉಂಟುಮಾಡಬಹುದು. ಆದರೆ ನಮ್ಮ ಪ್ರಯಾಣ ಬದಲಾಗುತ್ತಿದೆ. ಸೂಫಿ ಎಸಗಿರುವ ಧರ್ಮ ನಿಂದೆ ಕಾರಣಕ್ಕಾಗಿ ನಾವು ನಮ್ಮ ಮದುವೆಯನ್ನು ಹಾಗೂ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದೇವೆ" ಎಂದು ಅಂಜಲಿ ಹೇಳಿಕೊಂಡಿದ್ದಾರೆ.

Advertisement
Tags :
Advertisement